ಯೋಗ ಇದ್ದವರಿಗೆ ಸಚಿವ ಸ್ಥಾನ

web 8
Published on

ಚಿಕ್ಕಮಗಳೂರು: ಸಚಿವರಾಗುವ ಯೋಗ್ಯತೆ ಬಹಳಷ್ಟು ಶಾಸಕರಿಗೆ ಇದೆ.ಆದರೆ ಯೋಗ ಯಾರಿಗೆ ಒದಗಿಬರಲಿದೆ ಎಂಬುದನ್ನು ಕಾದು ನೋಡೋಣ ಎಂದು ಸಿ.ಟಿ.ರವಿ ಹೇಳಿದರು. ನಾನು ವಿದ್ಯಾರ್ಥಿ ಆಗಿದ್ದಾಗ ಒಂದು ಹೆಣ್ಣು ಆರು ಕಣ್ಣು ಎಂಬ ಚಿತ್ರ ತೆರೆಕಂಡಿತ್ತು. ಅದೇ ರೀತಿ ಖಾಲಿ ಇರುವ 7 ಸಚಿವ ಸ್ಥಾನಗಳಿಗೆ 21 ಶಾಸಕರು ಆಕಾಂಕ್ಷಿಗಳಿದ್ದಾರೆ. ಯೋಗ ಇದ್ದವರಿಗೆ ಸಚಿವ ಸ್ಥಾನ ದಕ್ಕುತ್ತದೆ. ಪಕ್ಷದಲ್ಲಿ 105 ಸ್ಥಾನ ತಂದವರು ಹಾಗೆ ಸರ್ಕಾರ ಅಧಿಕಾರಕ್ಕೆ ಬರಲು ಸಹಕಾರ ಕೊಟ್ಟ ಇಬ್ಬರನ್ನು ಮರೆಯದಂತೆ ಮುಖ್ಯಮಂತ್ರಿ ತಕ್ಕಡಿ ತೂಗಿ ಸಮತೋಲನ ಕಾಪಾಡುತ್ತಾರೆಂಬ ವಿಶ್ವಾಸ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಸಚಿವ ಸಂಪುಟ ವಿಸ್ತರಣೆ ಕುರಿತಂತೆ ರ್ಚಚಿಸಲು ಎರಡು ದಿನದಲ್ಲಿ ಅವರೇ ಹೇಳಿರುವ ಪ್ರಕಾರ ಮುಖ್ಯಮಂತ್ರಿ ದೆಹಲಿಗೆ ತೆರಳುವ ಸಾಧ್ಯತೆಗಳಿದ್ದು, ವರಿಷ್ಠರ ಅನುಮತಿ ಪಡೆದು ಮುಂದಿನ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net