ಕೋಮು ಗಲಭೆ ಸಿಐಡಿ ತನಿಖೆಗೆ ಚಿಂತನೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Minister-N.Cheluvarayaswamy
Published on

ಮಂಡ್ಯ: ನಾಗಮಂಗಲದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮಾಡಿಸಬೇಕೆಂದು ಚಿಂತನೆ ನಡೆಯುತ್ತಿದೆ. ಈ ಬಗ್ಗೆ ಸಿಎಂ ಜತೆ ಈಗಾಗಲೇ ಮಾತಾಡಿದ್ದೇನೆ. ಅಂತೆಯೇ ಯಾರಿಂದ ತನಿಖೆ ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ. ಅದರಂತೆ ಈ ಗಲಭೆಯ ಬಗ್ಗೆ ಸಂಪೂರ್ಣ ವರದಿ ಕೊಡಲು ಹೇಳಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ವೇಳೆ ಕೇರಳದವರು ಬಂದು ಹೋಗಿಲ್ಲ. ಕೇರಳದವರು ನಾಗಮಂಗಲದ ಬೇಕರಿಯಲ್ಲಿ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಅವರು ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ವಶಕ್ಕೆ ಪಡೆಯಲಾಗಿದೆ. ಪಿಎಫ್‌ಐ ಸಂಘಟನೆಯವರು ಎನ್ನುವುದಕ್ಕೆ ಆಗಲ್ಲ. ಅದರಂತೆ ಊಹಾಪೋಹಗಳೆಲ್ಲ ಬೇಡ. ನನಗೆ ಇದನ್ನು ಬೆಳೆಸುವುದಕ್ಕಿಂತ ಶಾಂತಿ ಸೃಷ್ಟಿ ಮಾಡಬೇಕು. ಆದರೆ ಗಲಭೆಯಲ್ಲಿ ಯಾರು ಇದ್ದಾರೆಂದು ಪತ್ತೆ ಮಾಡಿ ಹೇಳುತ್ತೇವೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ತನಿಖೆ ಆಗುತ್ತಿದೆ ಎಂದರು.

ಒಂದು ಕಡೆ ಗಣಪತಿ ಬಂದಿದ್ದು, ಹೋಗಿದ್ದು. ಇನ್ನೊಂದು ಕಡೆ ಎಡರು ಕೋಮಿನ ನಡುವೆ ಘರ್ಷಣೆ ಆಗಿದ್ದು. ಪೊಲೀಸ್ ಠಾಣೆ ಬಳಿ ಬಂದಾಗ ಕಲ್ಲು ಹೊಡೆದಿದ್ದು, ಬೆಂಕಿ ಹಾಕಿದ್ದು ಯಾರು ಎಂದು ನೋಡಬೇಕು. ಸಧ್ಯ ಎರಡು ಕೋಮಿನ ಜನರು ಎಲ್ಲ ಹಬ್ಬಗಳನ್ನು ಆಚರಿಸಬೇಕೆಂದು ತೀರ್ಮಾನ ಮಾಡಲಾಗಿದೆ. ಇಂದು ನಾಗಮಂಗಲದಲ್ಲಿ ಎರಡು ಮೂರು ಕಡೆ ಗಣಪತಿ ವಿಸರ್ಜನೆ ಮಾಡುತ್ತಾರೆ. ಅಲ್ಲಿಗೆ ಮುಸ್ಲಿಂರು ಹೋಗಿ ಜ್ಯೂಸ್ ಕೊಟ್ಟು, ಗಣಪತಿಗೆ ಹಾರ ಹಾಕುತ್ತಾರೆ. ನಾಗಮಂಗಲದ ಶಾಂತಿಯಾಗಿ ಇದೆ. ಸೆ.16ರಂದು ಮುಸ್ಲಿಂರ ಹಬ್ಬವೂ ಆಗುತ್ತದೆ. ಮಂಗಳವಾರದಿಂದ ಮತ್ತೆ ಗಣಪತಿ ವಿಸರ್ಜನೆ ಆಗುತ್ತದೆ. ಆದರೆ ಈ ಘಟನೆಗೆ ಕಾರಣಕರ್ತರು ಯಾರು?. ಸಣ್ಣಪುಟ್ಟ ಜಗಳವನ್ನು ಯಾರು ದುರುಪಯೋಗಮಾಡಿಕೊಂಡಿದ್ದಾರೆಂದು ನೋಡಬೇಕು. ಪೊಲೀಸರು ನಿರ್ದೇಶನ ನೀಡುವ ಸ್ಥಳಗಳಲ್ಲಿ ಮೆರವಣಿಗೆ ಮಾಡಬಹುದು. ಎಲ್ಲೂ ಕೂಡ ಯಾರಿಗೂ ನೋವಾಗದ ರೀತಿ ನೋಡಿಕೊಳ್ಳಬೇಕು. ಮಸೀದಿಯ ಮುಂದೆಯೇ ಹೆಚ್ಚು ಹೊತ್ತು ನಿಂತು ಕೂಗಬಾರದು. ಹೀಗಾಗಿ ಎಲ್ಲರೂ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಶಾಸಕ ಮುನಿರತ್ನ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುನಿರತ್ನ ಬ್ಯಾಗ್‌ರೌಂರ್ ಎಲ್ಲರಿಗೂ ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ಶಾಸಕರಾದವರನ್ನು ಶಾಸಕರಾಗಿಯೇ ಹೇಳಬೇಕು. ಅವರ ಬ್ಯಾಗ್‌ರೌಂಡ್ ಸರಿಯಲ್ಲ ಎಂದರೂ, ಸರಿಯಲ್ಲ ಎನ್ನುವುದಕ್ಕೆ ಆಗಲ್ಲ. ಮುನ್ನಿರತ್ನ ನಡೆದುಕೊಂಡಿರುವ ನಡವಳಿಕೆ, ಮಾತುಕತೆ ಅಸಭ್ಯವಾಗಿದೆ. ಇದು ಯಾರಿಗೂ ಕ್ಷೋಭೆ ತರುವ ವಿಚಾರ ಅಲ್ಲ. ಜನಪ್ರತಿನಿಧಿಗಳು ಹೀಗೆ ನಡೆದುಕೊಳ್ಳಬಾರದು. ಸಾಮಾನ್ಯ ಜನ ಮಾತಾಡಿದಾಗ ಗೊತ್ತಿಲ್ಲದೇ ಮಾತಾಡಿದ್ದಾರೆ ಎನ್ನಬಹುದು. ಆದರೆ ಶಾಸಕರು ಮಾತಾಡಿದ್ದನ್ನು ಆರ್.ಅಶೋಕ್ ಸಮರ್ಥನೆ ಮಾಡಿದ್ದಾರೆ. ಈ ತಪ್ಪಿತಸ್ಥರಲ್ಲಿ ಅವರು ಭಾಗಿಯಾಗಿರಬೇಕು. ಆಡಿಯೋ ನಾವು ತಿರುಚುವುದಕ್ಕೆ ಆಗುತ್ತಾ. ಆಡಿಯೋ ಅವರದೇ ಇದ್ಯಲ್ಲ. ವೇಲುನಾಯಕ ಎಂಬುವವರು ದೂರು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಅವರು ಎಲ್ಲವನ್ನೂ ಕಾಂಗ್ರೆಸ್ ಮೇಲೆ ಹೇಳುತ್ತಾರೆ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net