ರೈತರನ್ನು ಗೌರವಿಸುವ ಕೆಲಸವಾಗಲಿ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Minister Cheluvarayaswamy mandya
Published on

ಮಂಡ್ಯ: ಬೆಂಗಳೂರಿನ ಜಿ.ಟಿ ಮಾಲ್‌ನಲ್ಲಿ ಹಾವೇರಿ ಮೂಲದ ರೈತ ಫಕೀರಪ್ಪ ಎಂಬುವರು ಪಂಚೆ ಧರಿಸಿದ್ದಾರೆನ್ನುವ ಕಾರಣಕ್ಕೆ ಪ್ರವೇಶ ನಿರ್ಬಂಧ ಮಾಡಿರುವುದು ರೈತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಜಿ.ಟಿ ಮಾಲ್ ಸೆಕ್ಯುರಿಟಿ ರೈತ ಫಕೀರಪ್ಪ ಅವರ ಪ್ರವೇಶ ನಿರ್ಬಂಧ ಮಾಡಿದ್ದಾರೆ. ರೈತರಿಗೆ ಇಂತಹ ಅಪಮಾನ ಮಾಡಬಾರದು. ಪ್ಯಾಂಟ್ ಧರಿಸಿದವರಿಗೆ ಮಾತ್ರ ಮಾಲ್ ಒಳಗೆ ಪ್ರವೇಶ ಎನ್ನುವುದು ತಪ್ಪು. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ. ಕ್ಲಬ್, ಇಂಟರ್‌ನ್ಯಾಷನಲ್ ಫೆಸ್ಟ್‌ಗಳನ್ನು ಮಾತ್ರ ಡೆಸ್‌ಕೋಡ್ ಇರುತ್ತದೆ. ಈ ಹಿನ್ನೆಲೆಯಲ್ಲಿ ಜಿ.ಟಿ ಮಾಲ್ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಈ ಹಿಂದೆ ಮೆಟ್ರೋದಲ್ಲಿಯೂ ಸಹ ಇಂತಹುದೇ ಘಟನೆ ನಡೆದಿತ್ತು. ರೈತರನ್ನು ಗೌರವಿಸುವ ಕೆಲಸ ಆಗಬೇಕು ಎಂದು ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net