ಆ.18ರಂದು ಸಚಿವ ಚಲುವರಾಯಸ್ವಾಮಿ ಪ್ರವಾಸ: ಹಲವು ಕಾಮಗಾರಿಗೆ ಪೂಜೆ

Minister-N.Cheluvarayaswamy
Published on

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆ.18ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಬೆಳಗ್ಗೆ 10 ಗಂಟೆಗೆ ನಾಗಮಂಗಲ ತಾಲೂಕು ಶಿವನಹಳ್ಳಿ ಗ್ರಾಮ, 11.30ಕ್ಕೆ ಕಂಚನಹಳ್ಳಿ ಹಾಗೂ 12ಗಂಟೆಗೆ ಬಿ.ಜಿ ನಗರದಲ್ಲಿ ಡೇರಿ ನೂತನ ಕಟ್ಟಡ ಉದ್ಘಾಟನೆ, 12.30ಕ್ಕೆ ಜವರನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ, ಮಧ್ಯಾಹ್ನ 2ಗಂಟೆಗೆ ಹುಲಿಕೆರೆ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ಉದ್ಘಾಟನೆ, 2.30ಕ್ಕೆ ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, 3ಗಂಟೆಗೆ ಕೆ.ಮಲ್ಲೇನಹಳ್ಳಿ ಗ್ರಾಮದಲ್ಲಿ ವಸತಿ ನಿಲಯ ಉದ್ಘಾಟನೆ, 3.30ಕ್ಕೆ ಕಾಂತಪುರದಲ್ಲಿ ಸರ್ಕಾರಿ ಪ್ರೌಢಶಾಲೆಯ ಹೊಸ ಕಟ್ಟಡ ಉದ್ಘಾಟನೆ, 4ಗಂಟೆಗೆ ಬೋಗಾದಿಯಲ್ಲಿ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ, 5ಗಂಟೆಗೆ ಚಿಕ್ಕೋನಹಳ್ಳಿಪುರ ಹಾಗೂ 6ಗಂಟೆಗೆ ಶಿಖರನಹಳ್ಳಿ ಗ್ರಾಮದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 6.30ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net