ಬಿಜೆಪಿ ನೋಡಿದರೆ ಪಾಪಾ ಅನಿಸುತ್ತೆ: ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

Minister Cheluvarayaswami
Published on

ಮಂಡ್ಯ: ಬಿಜೆಪಿ ಕಷ್ಟ ನೋಡಿ ಅಯ್ಯೋ ಪಾಪಾ ಅನಿಸುತ್ತಿದೆ. ಆ ಪಕ್ಷಕ್ಕೆ ಯಡಿಯೂರಪ್ಪ ಹಾಗೂ ಅವರ ಮಗ ಅನಿವಾರ್ಯ. ಆದರೆ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದಕ್ಕೆ ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿಳಿದರು. ಬಳಿಕ ಅವರ ಮಗನಿಗೆ ಅವಕಾಶ ಕೊಡಬೇಕಿತ್ತು, ಆದರೆ ಕೊಡಲಿಲ್ಲ. ಆದರಿಂದು ಬಿಎಸ್‌ವೈ ಕುಟುಂಬ ಅನಿವಾರ್ಯವಾಗಿದೆ. ಬಿಜೆಪಿಯಲ್ಲಿ ಮನಸ್ಸು ಹೊಡೆದು ಹೋಗಿದೆ. ಸಂಪೂರ್ಣವಾಗಿ ಅವರು ವಿಚಲಿತಗೊಂಡಿದ್ದಾರೆ. ಕಳೆದ 6 ತಿಂಗಳಿಂದ ವಿರೋಧ ಪಕ್ಷದ ನಾಯಕರು ಸಿಕ್ಕಿಲ್ಲ. ರಾಜ್ಯಾಧ್ಯಕ್ಷರನ್ನ ಹುಡುಕಿದರೂ ಸಿಗಲಿಲ್ಲ. ಇದೀಗ ಬಿಎಸ್‌ವೈ ಅನಿವಾರ್ಯದ ಪರಿಸ್ಥಿತಿ ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಇದೆ. ಪ್ರೀತಿ ಮಾಡಿಲ್ಲ ಅನಿವಾರ್ಯದಿಂದ ಮಾಡಿದ್ದಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.

ನಮ್ಮ ಕುಮಾರಸ್ವಾಮಿ ಅವರು ಪ್ರೀತಿಯಿಂದ ಬಿಜೆಪಿಗೆ ಹೋಗಿಲ್ಲ, ಆದರೆ ಅನಿವಾರ್ಯ. ಬಿಜೆಪಿಯಲ್ಲಿ ಮನಸ್ಥಾಪ ದೊಡ್ಡ ಪ್ರಮಾಣದಲ್ಲಿದೆ. ನಮ್ಮದು ರಾಷ್ಟ್ರೀಯ ಪಕ್ಷ, 136 ಗೆದ್ದಿದ್ದೇವೆ ನಾವು. ಪಾಪಾ, ಅವರು ಗೆಲ್ಲುವುದಕ್ಕೆ ಕಷ್ಟ ಪಡುತ್ತಿದ್ದಾರೆ, ಮಾಡಲಿ. ಇನ್ನು ಜೆಡಿಎಸ್‌ನ ಮಂಜು ಮತ್ತು ಗೌರಿಶಂಕರ್ ಸೇರಿದ್ದಾರೆ. ಅವರಿಗೆ ನಮ್ಮ ಪಕ್ಷಕ್ಕೆ ಸ್ವಾಗತ. ಅನೇಕರು ಕಾಂಗ್ರೆಸ್‌ಗೆ ಬರಲು ತಯಾರು ಇದ್ದಾರೆ. ನಮ್ಮ ಪಕ್ಷದ ಸಿದ್ದಾಂತಕ್ಕೆ ಬದ್ಧರಾದವರನ್ನ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net