ಕೋಟಿ ಇರಲಿ ಎಂಟು ರೂಪಾಯಿ ಕೂಡ ಸಿಗಲಿಲ್ಲ: ಎಚ್‌ಡಿಕೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

Minister Cheluvarayaswami
Published on

ಮಂಡ್ಯ: ಜಿಲ್ಲೆಗೆ ಎಂಟು ಸಾವಿರ ಕೋಟಿ ರೂ ಅನುದಾನ ಕೊಟ್ಟಿದ್ದೇವೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆದರೆ ನಾನು ಸಚಿವನಾದ ಬಳಿ ಎಲ್ಲ ಕಡೆ ಹುಡುಕಿಸಿದರೂ 8 ರೂಪಾಯಿ ಕೂಡ ಕಾಣಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌ಡಿಕೆ 8 ಸಾವಿರ ಕೋಟಿ ರೂ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆದರೆ ಎಲ್ಲಿಯೂ ಅನುದಾನ ಪತ್ತೆಯಾಗಲಿಲ್ಲ. ಆದ್ದರಿಂದ ಆ ಚರ್ಚೆಯೇ ಅನಾವಶ್ಯಕ. ನಿರಂತರವಾಗಿ ಬಿಜೆಪಿ-ಜೆಡಿಎಸ್‌ನ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಏ.17ಕ್ಕೆ ಮಂಡ್ಯಕ್ಕೆ ಬರುತ್ತಾರೆ. ದೊಡ್ಡ ಮಟ್ಟದಲ್ಲಿ ಸಮಾವೇಶ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು ಇರುತ್ತಾರೆ ಎಂದರು.

ಕೇಂದ್ರದಲ್ಲಿ ಯಾರೇ ಪ್ರಭಾವಿ ಮಂತ್ರಿಯಾದರು ರಾಜ್ಯದ ಮೂಲಕವೇ ಅಭಿವೃದ್ಧಿ ಮಾಡಬೇಕು. ಕುಮಾರಸ್ವಾಮಿ ಪ್ರಹ್ಲಾದ್ ಜೋಷಿಗಿಂತ ಸೀನಿಯರ್ ಮಿನಿಸ್ಟರ್ ಆಗಲು ಆಗುತ್ತಾ?. ರಾಜ್ಯದಲ್ಲಿ ಮುಖ್ಯಮಂತ್ರಿ ಅಲ್ಟಿಮೆಟ್. ಸಿಎಂ ಭೇಟಿ ಮಾಡಿ, ಸಭೆ ಮಾಡಿ, ಕೇಂದ್ರದಿಂದ ಒಂದಷ್ಟು ಅನುದಾನವನ್ನು ನೀರಾವರಿಗೆ ಕೊಡುತ್ತೇವೆ. ಯಾವುಕ್ಕೆ ಬಳಸುತ್ತಿರಾ ಎನ್ನುವುದನ್ನು ಸಿಎಂ ಜತೆ ಸಭೆ ಮಾಡಬೇಕು. ಅದನ್ನ ಕುಮಾರಸ್ವಾಮಿ ಮಾಡುತ್ತಾರಾ. ಕೇಂದ್ರದ ಮಂತ್ರಿಗಳಿಗೆ ಅವರದೇ ಆದಂತಹ ವ್ಯಾಪ್ತಿ ಇರುತ್ತದೆ. ಅದರೊಳಗೆ ಕೆಲಸ ಮಾಡಬೇಕು ಎಂದು ಟಾಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net