ಅದೃಷ್ಟ ನೋಡಿ ಎಂದಿಗೂ ಮಳೆ ಬರಲ್ಲ: ಮಾಜಿ ಸಿಎಂ ಎಚ್ಡಿಕೆಗೆ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್

Minister Cheluvarayaswami
Published on

ಮಂಡ್ಯ: ಮಳೆ ಅಧಿಕಾರದಲ್ಲಿರುವವರ ಅದೃಷ್ಟ ನೋಡಿಕೊಂಡು ಬರಲ್ಲ. ಪ್ರಕೃತಿಯಲ್ಲಿ ಮಳೆ ನಮ್ಮನ್ನು ಕೇಳಿ ಬರುವುದಾಗಿದ್ದರೆ ನಿಯಂತ್ರಣ ಮಾಡಿಸಬಹುದಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಮ್ಮ ಅಧಿಕಾರದಲ್ಲಿ ಮಳೆ ಆಗಿತ್ತು ಎಂದಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸತ್ಯಹರಿಶ್ಚಂದ್ರರೂ, ಅವರು ರಾಜ್ಯದಲ್ಲಿ ಇದ್ದಾರೆ ಅಲ್ವಾ. ಏಕೆ ಮಳೆ ಬರುತ್ತಿಲ್ಲ. ನಮ್ಮನ್ನ ನೋಡಿ ಮಳೆ ಬರಲ್ಲ, ಅವರನ್ನು ನೋಡಿಯಾದರೂ ಮಳೆ ಬರಬೇಕಲ್ವಾ?. ಅವರು ಬಂದು ಇಲ್ಲಿ ಪೂಜೆ ಮಾಡಲಿ, ಹಾಗಾದರೂ ಮಳೆ ಬರಲಿ ಎಂದರು.

ಅಧಿಕಾರ ನೋಡಿ ಮಳೆ ಬರಲ್ಲ. ಸಿದ್ದರಾಮಯ್ಯ ಇದ್ದಾಗಲೂ ಮಳೆ ಹಾಗೂ ಬರನೂ ಬಂದಿದೆ. ಕುಮಾರಸ್ವಾಮಿ ಇದ್ದಾಗಲೂ ಮಳೆಯೂ ಬಂದಿದೆ, ಬರನೂ ಬಂದಿದೆ. ಬಿ.ಎಸ್.ಯಡಿಯೂರಪ್ಪ ಅವರು ಇದ್ದಾಗಲೂ ಎರಡು ಆಗಿದೆ. ರಾಜಕೀಯ ತೀಟೆ ಬಿಟ್ಟು ಬಿಟ್ಟು, ವಾಸ್ತವವಾಗಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಲೋಕಸಭಾ ಚುನಾವಣೆ ಇದೆ ಎಂದು ಇಲ್ಲಸಲ್ಲದ್ದು ಮಾತಾಡಬಾರದು ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net