ಸಿದ್ದರಾಮಯ್ಯ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಮಲಗಿಲ್ಲ: ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು

Minister N.Cheluvarayaswamy
Published on

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಷಾರಾಮಿ ಜೀವನ ಮಾಡುವುದಕ್ಕೆ ಬಂದಿಲ್ಲ, ಸೆವೆನ್ ಸ್ಟಾರ್ ಹೋಟೆಲ್ನಲ್ಲಿ ಮಲಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಕೆಆರ್‌ಎಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಐಷಾರಾಮಿ ವಿಮಾನದಲ್ಲಿ ಪ್ರಯಾಣ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು. ಮುಖ್ಯಮಂತ್ರಿ ಎಮರ್ಜೆನ್ಸಿ ಇದ್ದಾಗ ಉಪಯೋಗಿಸಿರುವುದು ಗೊತ್ತಿದೆ. ಬಸವರಾಜ ಬೊಮ್ಮಯಿ, ಯಡಿಯೂರಪ್ಪ ಎಷ್ಟು ಬಾರಿ ಓಡಾಡಿಲ್ಲ?. ಮಾಹಿತಿ ಬಿಡುಗಡೆ ಮಾಡಿದರೆ ಅವರು ಎಷ್ಟು ಇವರು ಎಷ್ಟು ಎಂದು ಗೊತ್ತಾಗುತ್ತದೆ ಎಂದರು.

ಮುಖ್ಯಮಂತ್ರಿ ರಸ್ತೆಯಲ್ಲಿ ಬಂದರೆ ಸಾರ್ವಜನಿಕರಿಗೆ ತೊಂದರೆ ಆಗುವ ದೃಷ್ಟಿ ಇದೆ. ಆದ್ದರಿಂದ ಅನಾವಶ್ಯಕವಾಗಿ ಟೀಕೆ ಮಾಡುವುದು ಸರಿಯಲ್ಲ. ಟೀಕೆ ಮಾಡುವುದಕ್ಕೆ ಏನು ಸಿಗದಿದ್ದಾಗ ಈ ರೀತಿ ಮಾಡುತ್ತಾರೆ. ಸಿದ್ದರಾಮಯ್ಯ ಬಗ್ಗೆ ವಿಪಕ್ಷದವರು ಹೇಳಿದರೆ ಜನ ಕೇಳುವುದಕ್ಕೆ ರೆಡಿ ಇಲ್ಲ. ಅವರು ಕರ್ನಾಟಕ ಭವನದಲ್ಲೆ ಉಳಿದುಕೊಂಡಿದ್ದರೆ ಹೊರತು ಸೆವೆನ್ ಸ್ಟಾರ್ ಹೋಟೆಲ್ನಲ್ಲಲ್ಲ. ಲೋಕಸಭೆ ಚುನಾವಣೆ ಚುನಾವಣೆ ಸಮೀಪ ಬಂದರುವುದರಿಂದ ಬಿಜೆಪಿಯವರು ಮಾತನಾಡಿಕೊಳ್ಳಲಿ ಎಂದರು ವ್ಯಂಗ್ಯವಾಡಿದರು.

ಜೆಡಿಎಸ್‌ನವರ ಬಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಗೆ ನಿಂತಿದ್ದಾರೆ ಪಾಪಾ. ಅವರ ಕಷ್ಟ ಅವರಿಗೆ ಬಿಡಿ. ಕುಮಾರಸ್ವಾಮಿ ಅವರು ಬಹಳ ಖುಷಿಯಾಗಿದ್ದಾರೆ. ಮೋದಿಗೆ ಇವರು ಅನಿವಾರ್ಯನೋ. ಜೆಡಿಎಸ್‌ನವರಿಗೆ ಮೋದಿ ಅನಿವಾರ್ಯನೋ ಚುನಾವಣೆ ಫಲಿತಾಂಶ ಬಂದ ಬಳಿಕ ಗೊತ್ತಾಗ್ತುದೆ. ನಾವು ನೂರು ದಾಟುತ್ತೇವೆ ಅಂತ ಹೇಳಿದ್ದೋ, ಅದರಂತೆ ಜನರು ನಮ್ಮ ಕೈ ಹಿಡಿದರು. ಎಚ್‌ಡಿಕೆ 123 ಸೀಟ್ ಗೆಲ್ಲುತ್ತೇವೆಂದು ಹೇಳಿದ್ದರು. ಆದರೆ ಏನಾಯ್ತು ಎಂದ ಅವರು, ಸಂಸದರ ಅಮಾನತು ಮಾಡಿರುವುದನ್ನು ನಾವು ಖಂಡಿಸಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಮಾನತು ಮಾಡುವುದು ಸರಿಯಲ್ಲ. ಇದು ಆಗಬಾರದಿತ್ತು, ಮೋದಿ ಅವರು ಈ ವಿಚಾರಕ್ಕೆ ಕೈ ಹಾಕಬಾರದಿತ್ತು. ಆದರೂ ಉದ್ಘಟತನ ಮಾಡಿದ್ದಾರೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net