ಬೊಮ್ಮಾಯಿ ಸರ್ಟಿಫಿಕೇಟ್ ನಮಗೆ ಬೇಡ: ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿರುಗೇಟು

Minister Cheluvarayaswami
Published on

ಮಂಡ್ಯ: ನಮಗೆ ಬೇಕಿರುವುದು ಸಾರ್ವಜನಿಕರ ಸರ್ಟಿಫಿಕೇಟ್ ಹೊರತು ಬಸವರಾಜ ಬೊಮ್ಮಾಯಿ ಕೊಡುವುದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ರಾಜ್ಯಸರ್ಕಾರ ಊಸರವಳ್ಳಿ ರೀತಿ ಬಣ್ಣ ಬದಲಾಯಿಸುತ್ತಿದೆ ಎನ್ನುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿರೋಧ ಪಕ್ಷದ ಸ್ಥಾನದಲ್ಲಿ ಇರುವವರು ಏನಾದರೊಂದು ಮಾತನಾಡಬೇಕು. ಆದ್ದರಿಂದ ಮಾತನಾಡುತ್ತಾರೆ ಅಷ್ಟೇ. ಅವರಿಗೆ ವಿರೋಧ ಪಕ್ಷದ ನಾಯಕನನ್ನೇ ಕೊಟ್ಟಿಲ್ಲ. ಪಕ್ಷದ ಅಧ್ಯಕ್ಷರನ್ನ ಕೂಡ ಕೊಟ್ಟಿಲ್ಲ. ಕೇಂದ್ರದ ನಾಯಕರಿಗೆ ರಾಜ್ಯ ನಾಯಕರ ಮೇಲೆ ವಿಶ್ವಾಸ ಹೊರಟು ಹೋಗಿದೆ. ಹೀಗಾಗಿ ವಿಶ್ವಾಸ ಗಳಿಸಲು ಏನಾದರೂ ಒಂದು ಹೇಳಿಕೆ ನೀಡುತ್ತಾರೆಂದು ವ್ಯಂಗ್ಯವಾಡಿದರು.

ಸರ್ಕಾರ ರೈತರ ಸಾವಿನ ನಡುವೆ ಕೇಕೆ ಹಾಕುತ್ತಿದೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಯಾರು ಆ ರೀತಿ ಹೇಳಿದ್ದಾರೆ?. ನಿಮಗೇನಾದರೂ ಆ ರೀತಿ ಅನಿಸುತ್ತಿದೆಯೇ?. 195 ತಾಲೂಕನ್ನು ಬರಪೀಡಿತವೆಂದು ೋಷಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. 160 ತಾಲೂಕು ಬರ ಅಂತಾ ಬಂದಿದೆ. ಆದರೆ ಇನ್ನು 30 ತಾಲೂಕನ್ನ ಬರವೆಂದು ಮಾಡಲೇಬೇಕು ಎನ್ನುತ್ತಿರುವುದು ತಪ್ಪಾ?. ಎಂಪಿ ಚುನಾವಣೆ ಇರುವುದರಿಂದ ಕಾಂಗ್ರೆಸ್‌ನ ವೇಗ ನೋಡಿ ಏನೋ ಹೇಳಬೇಕು ಎಂದು ಹೇಳಿರಬಹುದು. ನಾವು ರೈತರ ವಿಚಾರದಲ್ಲಿ ಪ್ರಾಮಾಣಿಕವಾಗಿದ್ದೇವೆ. ರೈತರ ವಿಚಾರದಲ್ಲಿ ಆಟವಾಡಲು ತಯಾರಿಲ್ಲ ಎಂದರು.

ನಿಖಿಲ್ಕುಮಾರಸ್ವಾಮಿಯ ಎಂಪಿ ಚುನಾವಣೆಯಲ್ಲಿ ರಾಜ್ಯಧರ್ಮ ಪಾಲನೆ ಮಾಡಲಿಲ್ಲ ಎಂಬ ಜೆಡಿಎಸ್ ನಾಯಕರ ಆರೋಪ ಮಾಡಿದ್ದಾರೆ. ಆದರೆ ಆಗ ಜೆಡಿಎಸ್ ನಾಯಕರು ನಮ್ಮನ್ನ ಕರೆಯಲಿಲ್ಲ, ಹಾಗಾಗಿ ನಾವು ಹೋಗಲಿಲ್ಲ. ನಾವು ಹೇಗೆ ಮೇಲೆ ಬಿದ್ದು ಹೋಗಲು ಆಗತ್ತದೆ. ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕೆನ್ನುವುದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಅಭಿಪ್ರಾಯ. ಅದಕ್ಕೆ ನಾನು ಏನು ಹೇಳಲ್ಲ. ಅವರು ಏಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ರಾಜಣ್ಣ ಅವರ ಹೇಳಿಕೆಯನ್ನು ತೆಗೆದುಕೊಳ್ಳಬೇಕೋ, ಬಿಡಬೇಕೋ ಎನ್ನುವುದನ್ನು ಪಕ್ಷ ನಿರ್ಧಾರ ಮಾಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net