ಯೋಗೇಶ್ವರ ಕುಮಾರಸ್ವಾಮಿಗೆ ಕಾಂಗ್ರೆಸ್ ಸರ್ಕಾರದ ಹಣೆಬರಹ ಬರೆಯಲು ಆಗಲ್ಲ : ಚಲುವರಾಯ ಸ್ವಾಮಿ ತಿರುಗೇಟು

Chaluvarayaswamy
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಮಾಜಿ ಸಚಿವರಾದ ಎಂಎಲ್ ಸಿ  ಸಿ.ಪಿ.ಯೋಗೇಶ್ವರ ತನ್ನ ಹಣೆಬರಹವನ್ನು ಅವರಿಗೆ ಬರೆದುಕೊಳ್ಳಲು  ಆಗಲಿಲ್ಲ. ಅಂತಹ ವ್ಯಕ್ತಿ ಬೇರೆಯವರ ಹಣೆಬರಹ ಬರೆಯುತ್ತಾನಾ? ಸರ್ಕಾರ ಉರುಳಿಸುತ್ತಾನಾ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಖಡಕ್ ಆಗಿ ಪ್ರಶ್ನಿಸಿದರು.

ನಗರದಲ್ಲಿ ಇಂದು ಕಲಬುರಗಿ ವಿಭಾಗ ಮಟ್ಟದ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಪತ್ರಕರ್ತರ ಜತೆಗೆ ಮಾತನಾಡಿ, ಜನವರಿಯ ಸಂಕ್ರಾತಿ ಹೊತ್ತಿಗೆ ಸರ್ಕಾರ ಉರಳುತ್ತೆ ಅನ್ನುವ ಎಂಎಲ್ ಸಿ ಯೋಗೇಶ್ವರ, ಸ್ವತ ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದ್ರು ಸೋತಿದ್ದಾನೆ. ಯೋಗೇಶ್ವರ, ಕುಮಾರಸ್ವಾಮಿ ಗೆ ಕಾಂಗ್ರೆಸ್ ಹಣೆಬರಹ ಬರೆಯಲು ಸಾಧ್ಯವಿಲ್ಲ ಎಂದರು.

ದೇವೇಗೌಡರನ್ನೇ ಬಲವಂತ ಮಾಡಿ ಮೈತ್ರಿ ಗೆ ಒಪ್ಪಿಸಿದ್ದಾರೆ. ಮಗನ ಹಿಂಸೆಯಿಂದ ಮೈತ್ರಿಗೆ ದೇವೇಗೌಡರು ಒಪ್ಪಿಕೊಂಡಿದ್ದಾರೆ.ಬಿಜೆಪಿ ಗೆ ಜೆಡಿಎಸ್, ಜೆಡಿಎಸ್ ಗೆ ಬಿಜೆಪಿ  ಅವಶ್ಯಕತೆ ಇದೆ. ಯಾಕೆಂದರೆ
ಇಬ್ಬರು ಮುಳುಗಿ ಹೋಗುವ  ಭಯದಲ್ಲಿದ್ದಾರೆ. ಹೀಗಾಗಿ
ಒಬ್ಬರ ಕೈ ಒಬ್ಬರು ಹಿಡಿಯುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ನಡವಳಿಕೆಯಿಂದ ಈ ಸ್ಥಿತಿ ಬಂದಿದೆ ಎಂದು ಚಲುವರಾಯಸ್ವಾಮಿ‌ ನುಡಿದರು.

ಬೆಂಬಲ ಕೊಟ್ಟವರನ್ನು, ಸಹಾಯ ಮಾಡಿದವರ ಬಗ್ಗೆ ಕುಮಾರಸ್ವಾಮಿ ಲಘುವಾಗಿ ಮಾತನಾಡಬಾರದು. ಸರ್ಕಾರ ಬೀಳುತ್ತದೆ ಅನ್ನೋ ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆ ನೋಡಿದರೆ.ಜೆ.ಎಚ್ ಪಟೇಲ್ ಅವರ ಗಾದೆ ಮಾತು ಅವರು ನೆನಪಿಸಿಕೊಳ್ಳಲಿ.ಅವರು ಕಾಯುತ್ತಿರಲಿ ಎಂದು ಸೂಚ್ಯವಾಗಿ ಹೇಳಿದರು.

ಎಲ್ಲಾ ಸಮುದಾಯಗಳನ್ನು ಗುರುತಿಸಿವ ಪಕ್ಷ ಕಾಂಗ್ರೆಸ್.ಜಾತಿ ಆಧಾರದ ಮೇಲೆ ಆಡಳಿತ ನಡೆಸಲು ಆಗಲ್ಲ.ಕಾರ್ಯಕರ್ಕರನ್ನು ಉಳಿಸಿಕೊಳ್ಳಲು ಕೆಲ ಹೇಳಿಕೆ ನೀಡುತ್ತಿದ್ದಾರೆ.  ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ನಡುಕ ಅಂತ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಅವರ ಜನರನ್ನು ಉಳಿಸಿಕೊಳ್ಳಲಿ ಎಂದು ತಿವಿದರು. ಸರ್ಕಾರ ಬೀಳಿಸಲು ಯಾರಿಂದಲೂ ಸಾದ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net