ಕೊಳ್ಳೆ ಹೊಡೆದವರು ಬಿಜೆಪಿಗರು

Minister meets shirur
Published on

ಕಾರವಾರ:ರಾಜ್ಯ ಸರ್ಕಾರದಲ್ಲಿ ಬಳಿ ಹಣದ ಕೊರತೆ ಇಲ್ಲ. ರಾಜ್ಯ ಬಿಜೆಪಿ ಸರ್ಕಾರ ಹೋದ ಮೇಲೆ ಭ್ರಷ್ಟಾಚಾರ ಕಡಿಮೆಯಾಗಿ ಹಣ ಉಳಿತಾಯ ಆಗುತ್ತಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಸಂಸ್ಥರ ಕುಟುಂಬವನ್ನು ಭೇಟಿ ಮಾಡಿ, ವೈಯಕ್ತಿಕವಾಗಿ 1.5 ಲಕ್ಷ ರೂ.ಗಳನ್ನು ಸಹಾಯ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ಹಿಂದೆ 37 ಸಾವಿರ ಕೋಟಿ ರೂ. ಇತ್ತು. ಈಗ 44 ಸಾವಿರ ಕೋಟಿ ರೂ. ಆಗಿದೆ. ಬಿಜೆಪಿಯವರು ಕೊಳ್ಳೆ ಹೊಡೆಯುತ್ತಿದ್ದರು. ಈಗ ಕೊಳ್ಳೆ ಹೊಡೆಯುವುದು ನಿಂತಿದೆ. ಅದಕ್ಕೆ ಹಣ ಉಳಿಯುತ್ತಿದೆ. ನೌಕರರಿಗೆ 7ನೇ ವೇತನ ಆಯೋಗ ಜಾರಿ, ಮಹಿಳೆಯರಿಗೆ ಎರಡು ಸಾವಿರ ರೂ. ಕೊಡುವುದು ಇವೆಲ್ಲ ಸಾಧನೆ ಅಲ್ಲವೆ ಎಂದು ಪ್ರಶ್ನಿಸಿದರು‌.

ಬಿಜೆಪಿಯವರು ಅತಿಥಿ ಶಿಕ್ಷಕರನ್ನು ಮೂರು ತಿಂಗಳು ತಡ ಮಾಡಿ ನೇಮಿಸುತ್ತಿದ್ದರು. ಯಾಕೆಂದರೆ ದುಡ್ಡು ಉಳಿಸಿ ಬೇರೆ ಕಡೆ ಕೊಳ್ಳೆ ಹೊಡೆಯಲು. ಬಿಜೆಪಿಯವರು ಎಂಟನೇ ತರಗತಿಯವರಿಗೆ ಮಾತ್ರ ವಾರದಲ್ಲಿ ಒಂದು ಮೊಟ್ಟೆ ಕೊಡುತ್ತಿದ್ದರು. ಈಗ ಅಜೀಂ ಪ್ರೇಮಜಿ ಫೌಂಡೇಶನ್ ಸಹಾಯದಿಂದ ವಾರದ ಎಲ್ಲ ದಿನ ಎಲ್ಲರಿಗೂ ಸೆಪ್ಟೆಂಬರ್ ಇಂದ  ಮೊಟ್ಟೆ ಕೊಡುತ್ತೇವೆ. ಇದೆಲ್ಲ ಕೊಳ್ಳೆ ಹೊಡೆದು ತಂದಿದ್ದಾ, ಇವೆಲ್ಲ ಸಾಧನೆ ಅಲ್ಲವೇ ಎಂದು ಬಿಜೆಪಿಗರ ವಿರುದ್ಧ ಹರಿಹಾಯ್ದರು.

ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಎಲ್ಲರಿಗೂ ಮನೆ ಕೊಡಲು ನಿರ್ಧಾರ ಆಗಿದೆ. ಅನಧಿಕೃತ, ಅನಧಿಕೃತ ಎಲ್ಲ ಮನೆಗೂ ಸಮಾನ ಪರಿಹಾರ ಮತ್ತು ಭಾಗಶಃ ಹಾನಿ ಆಗಿದ್ದರೆ 50 ಸಾವಿರ ರೂ. ನೆರವು ಕೊಡಲು ಸಂಪುಟದಲ್ಲಿ ತೀರ್ಮಾನ ಆಗಿದೆ ಎಂದರು. ರಾಜಕೀಯ ದೂರ ಇಟ್ಟು ಕೆಲಸ ಮಾಡುತ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net