ಹೆಬ್ಬಾಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

hebbala
Published on

ಬೆಂಗಳೂರು: ಹೆಬ್ಬಾಳ ಕ್ಷೇತ್ರವನ್ನು ಪ್ರತಿನಿಧಿಸುವ ನಗರಾಭಿವೃದ್ಧಿ ಹಾಗೂ ಯೋಜನೆ ಸಚಿವ ಬೈರತಿ ಸುರೇಶ್ ಹೆಬ್ಬಾಳದ ವಿವಿಧ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿದರು.

ವಾರ್ಡ್ ನಂ.21ರ ಶಿವಶಂಕರ ಬ್ಲಾಕ್ 1ನೇ ಕ್ರಾಸ್ ಹಾಗೂ ಸುಮಂಗಲಿ ಸೇವಾಶ್ರಮ ರಸ್ತೆ ಮತ್ತು ಆನಂದನಗರ ಕೆವಿನ್ ಪಾರ್ಕ್ ರಸ್ತೆ, ವಾರ್ಡ್ ನಂ.22ರ ಮನೋರಾಯನಪಾಳ್ಯ 12ನೇ ಕ್ರಾಸ್ ಮತ್ತು ಸೀತಪ್ಪ ಲೇಔಟ್ 2ನೇ ಕ್ರಾಸ್, ವಾರ್ಡ್ ನಂ.33ರ ದಿನ್ನೂರು ಬೀರಪ್ಪ ಗಾರ್ಡನ್ ಹಾಗೂ ಭುವನೇಶ್ವರಿ ನಗರ 2ನೇ ಕ್ರಾಸ್, ವಾರ್ಡ್ ನಂ.34ರ ಗಂಗಾನಗರ ಮುತ್ತಪ್ಪ ಬ್ಲಾಕ್ ನಲ್ಲಿ ರಸ್ತೆ ಡಾಂಬರೀಕರಣ, ಕಾಂಕ್ರೀಟ್ ರಸ್ತೆ, ಚರಂಡಿ ಅಭಿವೃದ್ಧಿ, ಒಳಚರಂಡಿ ಪೈಪ್ ಲೈನ್, ನೂತನ ಕಾವೇರಿ ಪೈಪ್ ಲೈನ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರು, ಹೆಬ್ಬಾಳ ಹಾಗೂ ಆರ್.ಟಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಪಕ್ಷದ ಮುಖಂಡರು, ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳು, ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net