

ಚಿಕ್ಕೋಡಿ ಗ್ರಾಮೀಣ: ಕೇಂದ್ರ ಗೃಹ ಸಚಿವ ಅಮಿತ್ ಷಾ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಮಾನಕರವಾಗಿ ಮಾತನಾಡಿದ್ದನ್ನು ಖಂಡಿಸಿ ತಾಲೂಕಿನ ಯಕ್ಸಂಬಾ ಪಟ್ಟಣದ ಅಂಬೇಡ್ಕರ್ ಭವನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದಲಿತ ಸಮುದಾಯದಿಂದ ಸೋಮವಾರ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿನೋದ ಚಿತಳೆ, ವಿದ್ಯಾಧರ ಚಿತಳೆ, ರಾಕೇಶ ಮಾಳಗೆ, ಸುರೇಶ ಅಂಕಲೆ, ಪ್ರಕಾಶ ಕಾಂಬಳೆ, ಶಿವರಾಜ ಚಿತಳೆ, ಮಹಾದೇವ ಮಾಳಗೆ, ಶ್ರವಣ ತಳವಾರ, ಕಾರ್ತಿಕ ಮಾಳಗೆ, ಪ್ರಜ್ಞಾನಂದ ಹುಲ್ಲನ್ನವರ, ಸಂತೋಷ ಚಿತಳೆ, ರಾಹುಲ್ ನಾಯಿಕ, ಮುತ್ತು ಕುರಣೆ, ನವೀನ ಕಾಂಬಳೆ, ಧನಪಾಲ ಹೆಜ್ಜೆ, ಗೌತಮ ಶೇರಖಾನ, ದಲಿತ ಸಮುದಾಯದ, ಯುವಕರು ಹಾಗೂ ಇತರರು ಇದ್ದರು.