

ಕೊಪ್ಪಳ: ವಿಧಾನಸಭೆ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ನಿಶ್ಚಿತ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.
ಸಂಡೂರು, ಶಿಗ್ಗಾಂವ್ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಬಿಜೆಪಿ ಒಂದೂ ಸ್ಥಾನ ಗೆಲ್ಲುವುದಿಲ್ಲ. ಮುಡಾದಲ್ಲಿ ಯಾವುದೇ ಹಗರಣವಾಗಿಲ್ಲ. ಸದ್ಯ ತನಿಖೆ ನಡೆಯುತ್ತಿದೆ ನಡೆಯಲಿ. ಬಿಜೆಪಿಯವರು ಕೇಳಿದ್ದಕ್ಕೆ ಸೈಟ್ ವಾಪಸ್ ನೀಡಿದ್ದಾರೆ. ರ್ಖಗೆ ಕುಟುಂಬವು ಭೂಮಿ ಹಸ್ತಾಂತರಿಸಿದೆ. ಮುಡಾದಲ್ಲಿ ಸೈಟ್ ಪಡೆದವರ ವಿವರ ಬಹಿರಂಗಪಡಿಸಿದ್ದೇವೆ. ಅದರಲ್ಲಿ ಬಿಜೆಪಿ, ಜೆಡಿಎಸ್ನವರೂ ಇದ್ದಾರೆ. ಅವರು ಯಾಕೆ ಸೈಟ್ ವಾಪಸ್ ನೀಡಿಲ್ಲ. ನಾವು ತಪು$್ಪ ಮಾಡಿದ್ದೇವೆಂದು ಸೈಟ್ ವಾಪಸ್ ಕೊಟ್ಟಿಲ್ಲ. ಉದಾರತೆಯಿಂದ ನೀಡಿದ್ದೇವೆಂದು. ರಾಜೀನಾಮೆ ನೀಡುವಂತೆ ಬಿಜೆಪಿಗರು ಆಗ್ರಹಿಸುತ್ತಿದ್ದಾರೆ. ಚುನಾವಣೆ ಬಾಂಡ್ ವಿಚಾರದಲ್ಲಿ ಕೋರ್ಟ್ ಛೀಮಾರಿ ಹಾಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಎಷ್ಟು ಜನ ರಾಜೀನಾಮೆ ನೀಡಿದ್ದಾರೆ ? ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯೋತ್ಸವಕ್ಕೆ 69 ರಾಜ್ಯೋತ್ಸವ, ತಲಾ 50 ಪುರುಷ, ಮಹಿಳೆಯರಿಗೆ ವಿಶೇಷ ಪ್ರಶಸ್ತಿ ನೀಡಲಾಗುವುದು. ಸಾಮಾಜಿ, ಶೈಕ್ಷಣಿಕ, ಆರ್ಥಿಕ ಗಣತಿ ವರದಿ ಸರ್ಕಾರದ ಕೈ ಸೇರಿದೆ. ಸಿಎಂ ಸೂಚನೆಯಂತೆ ನಾನು ಕ್ರಮವಹಿಸುವೆ. ಈವರೆಗೂ ನಾನೇ ವರದಿ ನೋಡಿಲ್ಲ. ಸುಮ್ಮನೆ ಅವೈಜ್ಞಾನಿಕವಾಗಿದೆ ಎಂದು ಹೇಳುವುದು ಸರಿಯಲ್ಲ. 30 ಡಿಸಿಗಳು ಗಣತಿ ಕಾರ್ಯ ಮಾಡುತ್ತಿದ್ದಾರೆ. ಸಂಪುಟದಲ್ಲಿ ಚರ್ಚಿಸಿ ಮುಂದಿನ ನಡೆ ಅನುಸರಿಸಲಾಗುವುದೆಂದರು.
ಕಾರಟಗಿಯಲ್ಲಿ ಸರ್ಕಾರಿ ಜಾಗದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತಿದೆ. ಸೈಟ್ ಪಕ್ಕದಲ್ಲಿ ಬಿಜೆಪಿಯವರಿಗೆ ಸೇರಿದ ಜಾಗವಿದೆ. ಅದಕ್ಕೆ ಕಾಮಗಾರಿಗೆ ವಿರೋಧಿಸುತ್ತಿದ್ದಾರೆ. ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಕಾಮಗಾರಿ ಮಾಡಿದವರಿಗೆ ಶ್ರೀ ಅನುದಾನ ಬಿಡುಗಡೆ ಮಾಡಲಾಗುವುದು. ಬೋರ್ಡ್ನಲ್ಲಿ ದುಡ್ಡಿದೆ. ನಮ್ಮ ಪಾಲಿನ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು.