

ಕೊಪ್ಪಳ: ತುಂಗಭದ್ರಾ ಜಲಾಶಯದ ಹೂಳಿಗೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಕೆಲ ತಾಂತ್ರಿಕ ತೊಂದರೆಗಳಿದ್ದು, ಮೂರು ರಾಜ್ಯಗಳು ಸಭೆ ನಡೆಸಿ ಅಂತಿಮ ರ್ನಿಣಯ ಕೈಗೊಳ್ಳಬೇಕಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ನಾನು ಮೊದಲು ಸಚಿವನಾಗಿದ್ದಾಗ ಸಮಾನಾಂತರ ಜಲಾಶಯಗಳ ನಿರ್ಮಾಣಕ್ಕೆ ಸರ್ವೇ ಮಾಡಿಸಿದ್ದೆ. ಆಗ 8 ಸಾವಿರ ಕೋಟಿ ರೂ. ಅಂದಾಜು ಮಾಡಲಾಗಿತ್ತು. ಹಿಂದಿನ ಸರ್ಕಾರ ಕೇವಲ ಬಜೆಟ್ನಲ್ಲಿ ಯೋಜನೆ ಘೋಷಿಸಿದೆ. ಬೇರೆ ಕೆಲಸ ಮಾಡಿಲ್ಲ. ನಾವು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿಕೊಂಡು ಮುಂದಡಿ ಇಡುತ್ತೇವೆ. ಜಲಾಶಯದ ಸುರಕ್ಷತೆ ಕುರಿತು ತನಿಖಾ ತಂಡ ಭೇಟಿ ನೀಡಿ ವರದಿ ಸಲ್ಲಿಸಿದೆ. ಸರ್ಕಾರಕ್ಕೆ ನೇರವಾಗಿ ವರದಿ ಬರುವುದಿಲ್ಲ. ಟಿಬಿ ಬೋರ್ಡ್, ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆ ಆಗಲಿದೆ. ಹಿಂದಿನ ಸರ್ಕಾರಕ್ಕೆ ಕ್ರಸ್ಟ್ ಗೇಟ್ ಬದಲಾಯಿಸುವಂತೆ ಸಮಿತಿ ಶಿಾರಸ್ಸು ಮಾಡಿತ್ತು. ಆದರೆ, ರ್ನಿಲಕ್ಷ$್ಯ ಮಾಡಲಾಗಿದೆ. ಈಗ ಬರುವ ವರದಿ ಆಧರಿಸಿ ಸುಧಾರಣ ಕ್ರಮ ಕೈಗೊಳ್ಳಲಾಗುವುದೆಂದರು.
ಗಂಗಾವತಿ ಸೇರಿ ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿರುವ ಆರೋಪಗಳಿವೆ. ತಕ್ಷಣ ಕ್ರಮ ಕೈಗೊಳ್ಳಲು ಎಸ್ಪಿಗೆ ಸೂಚನೆ ನೀಡಲಾಗಿದೆ. ದಲಿತರ ದೌರ್ಜನ್ಯ ಪ್ರಕರಣಗಳು ಹೆಚ್ಚಿದ್ದು, ಶ್ರೀವೇ ಡಿಸಿ, ಎಸ್ಪಿ ಹಾಗೂ ವಿವಿಧ ಸಂಟನೆಗಳೊಡನೆ ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಎಲ್ಲಿಯೇ ಆಗಲಿ, ಯಾರೇ ಆಗಲಿ ಪ್ರಚೋದನಕಾರಿ ಹೇಳಿಕೆ ನೀಡಿದಲ್ಲಿ ಮೂಲಾಜಿಲ್ಲದೇ ಶಿಸ್ತುಕ್ರಮ ಜರುಗಿಸುತ್ತೇವೆ. ಯಾವ ಸಂಟನೆ, ಪಕ್ಷದವರಾದರೂ ಬಿಡುವುದಿಲ್ಲ.
ಕೊಪ್ಪಳದಲ್ಲಿ ಕಾನಿಸ್ಟೇಬಲ್ ಒಬ್ಬ ಸಿಡಿಆರ್ ಹಾಗೂ ಟವರ್ ಡಂಪ್ ಮಾಹಿತಿ ಕದ್ದು ಹಂಚಿಕೆ ಮಾಡಿದ್ದಾನೆ. ಆತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಶ್ರೀವೆ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು.