ಗಣಿಗಾರಿಕೆಗೆ ಅವಕಾಶ ನೀಡಿದರೆ ಜೀವವೈವಿಧ್ಯ ಹಾಳು

Sandur Sk Heremutt
ಸಂಡೂರು ತಾಲೂಕಿನ ರಾಮಘಡ ಅರಣ್ಯ ಪ್ರದೇಶಕ್ಕೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ, ಟಿ.ಎಂ.ಶಿವಕುಮಾರ್, ಶ್ರೀಶೈಲ ಆಲದಹಳ್ಳಿ, ಮೂಲೆಮನೆ ಈರಣ್ಣ ಭೇಟಿ ನೀಡಿ ಪರಿಶೀಲಿಸಿದರು.
Published on

ಸಂಡೂರು: ಇಲ್ಲಿನ ರಾಮಘಡ ಅರಣ್ಯ ಪ್ರದೇಶ ಹಾಗೂ ಸ್ವಾಮಿಮಲೆ ಅರಣ್ಯ ಪ್ರದೇಶದ ದೇವದಾರಿಯಲ್ಲಿ ಗಣಿಗಾರಿಕೆ ಅವಕಾಶ ನೀಡಿದರೆ 1 ಲಕ್ಷಕ್ಕೂ ಹೆಚ್ಚು ಮರಗಿಡಗಳು, ಜೀವವೈವಿಧ್ಯವನ್ನು ಹಾಳು ಮಾಡಿದಂತಾಗುತ್ತದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.

ಎರಡು ಅರಣ್ಯ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಕೆಐಒಸಿಎಲ್‌ಗೆ 485.77 ಹೆಕ್ಟೇರ್, ರಾಮಘಡದಲ್ಲಿ ವಿಎಸ್‌ಐಎಲ್‌ಗೆ 60.70 ಹೆಕ್ಟೇರ್ ಪ್ರದೇಶವನ್ನು ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ನವಿಲು, ಕರಡಿ, ಚಿರತೆ, ಕೊಂಡಗುರಿ, ಕಾಡುಹಂದಿ ಸೇರಿ ಇತರ ಪ್ರಾಣಿಗಳಿಗೆ ತೊಂದರೆ ಆಗಲಿದೆ. ಶ್ರೀಗಂಧ, ರಕ್ತಚಂದನ, ಬೇವು, ಹುಣಸೆ, ಹಾಲ, ಹಕ್ಕಿ, ಹೆಬ್ಬೇವು ಸೇರಿ 91 ಸಾವಿರ ಜಾತಿಯ ಗಿಡಮರಗಳು ನಾಶವಾಗಲಿವೆ.

ಇದರೊಂದಿಗೆ ಪರಿಸರ ಹಾಳಾಗಲಿದ್ದು, ಇದು ಅವೈಜ್ಞಾನಿಕ ಕ್ರಮವಾಗುತ್ತದೆ. ಆದ್ದರಿಂದ ಸರ್ಕಾರ ಅನುಮತಿ ನೀಡಬಾರದೆಂದು ಒತ್ತಾಯಿಸಿದರು. ಮುಖಂಡರಾದ ಟಿ.ಎಂ.ಶಿವಕುಮಾರ್, ಶ್ರೀಶೈಲ ಆಲದಹಳ್ಳಿ, ಎಂಎಲ್‌ಕೆ ನಾಯ್ಡು, ಈರಣ್ಣ ಮೂಲೆಮನೆ, ಮೌನೇಶ್, ಜಿ.ಕೆ.ನಾಗರಾಜ್, ಟಿ.ಕೆ.ಮಂಜುನಾಥ, ನೀಲಕಂಠ, ಅಂಜಿನಿ, ಕಾಡಪ್ಪ, ಪರಮೇಶಿ, ಸುಬಾನಿ, ನಾಗರಾಜ, ಲಿಂಗರಾಜು, ಕಾಶಪ್ಪ, ಶಿವು, ಕಾಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net