470 ಹುದ್ದೆಗೆ ನೇರ ಸಂದರ್ಶನ: ಜು.5ರಂದು ಮಂಡ್ಯ ನಗರದಲ್ಲಿ ಮಿನಿ ಉದ್ಯೋಗ ಮೇಳ

job
Published on

ಮಂಡ್ಯ: ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಖಾಲಿರುವ 470 ಹುದ್ದೆಗೆ ಜು.5ರಂದು ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನದ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಆಕ್ಸಿಕ್ ಬ್ಯಾಂಕ್‌ನಲ್ಲಿ ಬ್ಯುಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ 100 ಹುದ್ದೆ ಖಾಲಿ ಇದ್ದು, ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದು. ಮಾಸಿಕ 18,600 ರೂ ಹಾಗೂ ಇನ್‌ಸೆಂಟಿವ್ ಇರಲಿದೆ. ಇ.ಎಸ್.ಎಸ್.ವಿ.ಇ.ಇ ರಿಕ್ರೂಟಿವ್ ಸಂಸ್ಥೆಯಲ್ಲಿ ಈಸಿ ಕಸ್ಟಮರ್ ಅಸೋಸಿಯೇಟ್ 100 ಹುದ್ದೆಗಳಿದ್ದು, ಯಾವುದೇ ಪದವಿ ಪಡೆದಿರುವವರು ಪಾಲ್ಗೊಳ್ಳಬಹುದು. ಮಾಸಿಕ 26 ಸಾವಿರ ರೂ ವೇತನವಿದೆ.
ಕ್ವಿಕ್ ಎಚ್.ಆರ್. ಸಂಸ್ಥೆಯಲ್ಲಿ ಪ್ಯಾಕೇಜಿಂಗ್ ಸ್ಟಾಫ್‌ನ 30 ಹುದ್ದೆಗಳಿದ್ದು, ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವವರು ಸಂದರ್ಶನಕ್ಕೆ ಹಾಜರಾಗಬಹುದು. ಮಾಸಿಕ 11 ಸಾವಿರ ರೂ ಜತೆಗೆ ಊಟ ಹಾಗೂ ವಸತಿ ಸೌಲಭ್ಯ ಸಿಗಲಿದೆ. ಪೀಪಲ್ ಸೆಕ್ಯೂರಂ ಎಚ್.ಆರ್ ಪ್ರೈ ಲಿಮಿಟೆಡ್‌ನಲ್ಲಿ 100 ಟೆಕ್ನಿಷಿಯನ್ ಹುದ್ದೆ ಖಾಲಿ ಇವೆ. ಎಸ್‌ಎಸ್‌ಎಲ್‌ಸಿ, ಪಿ.ಯು.ಸಿ, ಪದವಿ, ಐಟಿಐ(ಯಾವುದೇ ಟ್ರೇಡ್), ಡಿಪ್ಲಮೋ(ಯಾವುದೇ ಟ್ರೇಡ್) ಮತ್ತು ಬಿ.ಇ(ಮೆಕ್ಯಾನಿಕಲ್) ವ್ಯಾಸಂಗ ಮಾಡಿರುವವರಿಗೆ ಅವಕಾಶ. ಮಾಸಿಕ 18 ಸಾವಿರ ರೂ ವೇತನ ನೀಡಲಾಗುತ್ತಿದೆ. ನಿವಬುಪ ಹೆಲ್ತ್ ಇನ್ಶೂರೆನ್ಸ್ ಕಂಪನಿಯಲ್ಲಿ ಖಾಲಿ ಇರುವ 40 ಟೆಲಿಸೇಲ್ಸ್ ಹುದ್ದೆ ನೇಮಕಾತಿಗೆ ಯಾವುದೇ ಪದವಿ ಹೊಂದಿರುವವರು ಭಾಗವಹಿಸಬಹುದು. ಮಾಸಿಕ 20,800 ರೂ ವೇತನ ಸಿಗಲಿದೆ. ಸ್ಪೆಕ್ಟ್ರಂ ಟೂಲ್ಸ್ ಸಂಸ್ಥೆಯಲ್ಲಿ 100 ಮೆಷಿನ್ ವರ್ಕ್ಸ್ ಹುದ್ದೆ ಖಾಲಿ ಇದೆ. ಐ.ಟಿ.ಐ(ಯಾವುದೇ ಟ್ರೇಡ್) ವ್ಯಾಸಂಗ ಮಾಡಿರುವವರು ಸಂದರ್ಶನದಲ್ಲಿ ಭಾಗವಹಿಸಬಹುದು. ಆಯ್ಕೆಯಾದವರಿಗೆ ಮಾಸಿಕ 16 ಸಾವಿರ ರೂ ವೇತನ ನೀಡಲಾಗುತ್ತಿದೆ.
ಆಸಕ್ತ 18 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ ಸ್ವವಿವರದೊಂದಿಗೆ ಅಂದು ಬೆಳಗ್ಗೆ 10ಗಂಟೆಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಹಿತಿಗೆ ದೂ.ಸಂ 08232-295124 ಅಥವಾ ಮೊ.ಸಂ 9164642684 ಮತ್ತು 8970646629 ಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net