ಗಣಿ ಅಭಿವೃದ್ಧಿಗೆ ಕ್ರಮ

23 HATTI 1
Published on

ಹಟ್ಟಿಚಿನ್ನದಗಣಿ: ಬೀಳಗಿ ಶಾಸಕ ಹಾಗೂ ಹಟ್ಟಿಚಿನ್ನದಗಣಿ ಕಂಪನಿ ನೂತನ ಅಧ್ಯಕ್ಷ ಜೆ.ಟಿ.ಪಾಟೀಲರನ್ನು ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಬೆಂಗಳೂರಿನ ಶಾಸಕರ ಭವನದಲ್ಲಿ ಶುಕ್ರವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ಗಣಿ ಕಂಪನಿಯ ಸಮಸ್ಯೆ ಕುರಿತು ಮಾಹಿತಿ ನೀಡುವುದರೊಂದಿಗೆ ಗಣಿ ಅಭಿವೃದ್ಧಿ, ವಂದಲಿ ಚಿನ್ನದ ಗಣಿ ಪುನರಾರಂಭ, ಕಾರ್ಮಿಕರಿಗೆ ಉದ್ಯೋಗ, ಕಾಲನಿ, ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದು ಮತ್ತು ಹೊಸ ನೇಮಕ ಪ್ರಕ್ರಿಯೆ ಕುರಿತು ಚರ್ಚಿಸಿದರು. ಕಾರ್ಮಿಕ ಸಂಘ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಗಣಿ ಅಭಿವೃದ್ಧಿ ಮಾಡಲಾಗುವುದು ಎಂದು ಜೆ.ಟಿ.ಪಾಟೀಲ್ ತಿಳಿಸಿದ್ದಾರೆ ಎಂದು ಡಿ.ಎಸ್ ಹೂಲಗೇರಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net