ಹಿರಿಯ ಭೂವಿಜ್ಞಾನಿ ಡಾ. ಉಮೇಶ ಬುಗರಿ ಹೇಳಿಕೆ; ಒನ್ ಸ್ಟೇಟ್ ಒನ್ ಜಿಪಿಎಸ್ ಸಮಗ್ರ ಮಾಹಿತಿ ಅಗತ್ಯ

23 Dwd 3
Published on

ಧಾರವಾಡ: ಕಲ್ಲು ಗಣಿ ಗುತ್ತಿಗೆದಾರರಿಗೆ ಒನ್ ಸ್ಟೇಟ್ ಒನ್ ಜಿಪಿಎಸ್ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಗಳನ್ನು ಪಾಲಿಸಿ ಕಾರ್ಯಾಗಾರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಇಲಾಖೆಯ ಹಿರಿಯ ಭೂವಿಜ್ಞಾನಿ ಡಾ. ಉಮೇಶ ಎಂ. ಬುಗರಿ ಹೇಳಿದರು.
ನಗರದ ಆಲೂರ ವೆಂಟಕರಾವ್ ಸಭಾಭವನದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಬಳ್ಳಾರಿ ಡಿಜಿಎಂಎಸ್ ಸಹಯೋಗದೊಂದಿಗೆ ಕಲ್ಲು ಕ್ವಾರಿ ಮತ್ತು ಸ್ಟೋನ್ ಕ್ರರ‍್ಸ್ ಮಾಲೀಕರಿಗೆ ಮಂಗಳವಾರ ಆಯೋಜಿಸಿದ್ದ ಗಣಿ ಮತ್ತು ಭೂವಿಜ್ಞಾನ ಕಾಯ್ದೆ ಮತ್ತು ನಿಯಮಗಳು, ಗಣಿ ಸುರಕ್ಷತೆ ವಿಧಾನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ಡಿಜಿಎಂಎಸ್ ವಿಭಾಗದ ನಿರ್ದೇಶಕ ಯೊಹಾನ್ ಏಜರ್ಲಾ ಮಾತನಾಡಿ, ಬದಲಾದ ಇಂದಿನ ವ್ಯವಸ್ಥೆಯಲ್ಲಿ ಭೂವಿಜ್ಞಾನ ಇಲಾಖೆಯ ಕಾಯ್ದೆ ನಿಯಮಗಳನ್ನು ತಿಳಿದುಕೊಳ್ಳಬೇಕು. ಗಣಿ ಸುರಕ್ಷತೆಯ ವಿಧಾನಗಳ ಬಗ್ಗೆ ತಿಳಿವಳಿಕೆ ಹೊಂದುವುದು ಅಗತ್ಯ ಎಂದರು.
ಉಪ ನಿರ್ದೇಶಕ ನಾಗೇಂದ್ರಕುಮಾರ ಶ್ರೀರಾಮ, ಇಲಾಖೆಯ ಮಹೇಶ ಎಂ. ಗೌಡನಾಯಕ, ಬಿಂದನ ಪಾಟೀಲ, ಮೋಹನ ಎಸ್., ಸುನೀಲ ಕವಠೇಕರ್, ಕರ್ನಾಟಕ ಪಟ್ಟಾ ಲ್ಯಾಂಡ್ ಕ್ವಾರಿ ಮತ್ತು ಜಲ್ಲಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ವಿ.ಎಸ್. ಪಾಟೀಲ, ಜಿಲ್ಲಾ ಸ್ಟೋನ್ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆ ಸಂಘಗಳ ಸಂಯುಕ್ತ ಸಂಘದ ಧಾರವಾಡ ಅಧ್ಯಕ್ಷ ಕಲ್ಲಪ್ಪ ಹಟ್ಟಿ, ಇತರರಿದ್ದರು. ಬಸವರಾಜ ಕುಕನೂರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net