

ಹಟ್ಟಿಚಿನ್ನದಗಣಿ: ರಾಜ್ಯ ಸರ್ಕಾರದ ವಿದ್ಯುತ್ ಗೃಹಜೋತಿ ಯೋಜನೆಯಿಂದ ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕರು ವಂಚಿತರಾಗಿದ್ದು, ಕಂಪನಿಗೆ ಹೊರೆಯಾಗಿ ಪರಿಣಮಿಸಿದೆ.
ಹಟ್ಟಿಗಣಿ ಕಂಪನಿಯಲ್ಲಿ ಅಧಿಕಾರಿಗಳ ಕಾಲನಿ, ಗಾಂಧಿ ಮೈದಾನ, ಜತ್ತಿ, ಗುಂಡುರಾವ್, ಜೆ.ಪಿ ಶರ್ಮಾ, ನ್ಯೂಗುಂಡುರಾವ್, ಸಿಎಫ್, ನ್ಯೂ ಸಿಎಫ್, ಲೋಟಸ್, ಸ್ಟಾಫ್ ಎಂಪ್ಲಾಯಿಸ್ ಕಾಲನಿ, ಎಸ್‌ಯುಪಿ ಕಾಲನಿ ಸೇರಿ 2.5 ಸಾವಿರದಷ್ಟು ವಸತಿಗೃಹಗಳಿವೆ. ಸರ್ಕಾರ ಘೋಷಣೆ ಮಾಡಿದ ಪ್ರಕಾರ 200 ಯೂನಿಟ್ ಉಚಿತ ವಿದ್ಯುತ್ ನೀಡಿದರೆ ಕಂಪನಿಗೆ 5 ಲಕ್ಷ ರೂ.ವೆಚ್ಚ ತಗ್ಗಲಿದೆ.
ಸದ್ಯದ ಯೋಜನೆ ಏನು: ಹಟ್ಟಿಚಿನ್ನದಗಣಿ ಕಂಪನಿ ವಸತಿಗೃಹಗಳಿಗೆ ಸಿಎಸ್‌ಆರ್ ಯೋಜನೆಯಡಿ 1 ರೂ.ಗೆ ಒಂದು ಯೂನಿಟ್‌ನಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಜೆಸ್ಕಾಂಗೆ ವಿದ್ಯುತ್ ಬಿಲ್‌ನ್ನು ಕಂಪನಿ ಆಡಳಿತ ವರ್ಗವೇ ಭರಿಸುತ್ತಿದೆ. ಇದರಿಂದ ಕಾರ್ಮಿಕ ವರ್ಗಕ್ಕಿಂತ ಗಣಿ ಕಂಪನಿಗೆ ಅಧಿಕ ವೆಚ್ಚ ತಗಲುತ್ತಿದೆ.
ಗೃಹಜೋತಿ ಯೋಜನೆಯನ್ನು ಕಂಪನಿ ಕಾಲನಿಗಳಿಗೆ ವಿಸ್ತರಿಸುವ ಕುರಿತು ಚರ್ಚಿಸಲಾಗಿದೆ. ಯೋಜನೆ ಜಾರಿಯಾದರೆ ಕಂಪನಿ ಹಾಗೂ ಕಾರ್ಮಿಕರಿಗೆ ವರದಾನವಾಗಲಿದೆ. ಆದಷ್ಟೂ ಬೇಗನೆ ಸರ್ಕಾರದಿಂದ ಉಚಿತ ವಿದ್ಯುತ್ ಪಡೆಯುವ ಕುರಿತು ಕ್ರಮವಹಿಸಲಗುವುದು.ಸಂಜಯ್ ಬಿ.ಶೆಟ್ಟಣ್ಣನವರ್. ವ್ಯವಸ್ಥಾಪಕ ನಿರ್ದೇಶಕರು ಹಟ್ಟಿಚಿನ್ನದಗಣಿ ಕಂಪನಿ