ನನ್ನದು ಸ್ವಾರ್ಥ ರಹಿತ ಕೆಲಸ

12dvk 5
Published on

ಬೆಳಗಾವಿ: ಸ್ವಾರ್ಥ ರಹಿತವಾಗಿ ಕೆಲಸ ಮಾಡಿಕೊಂಡು ಬರುತ್ತಿರುವ ನಾನು, ಅಭಿವೃದ್ಧಿ ವಿಷಯದಲ್ಲಿ ಎಂದೂ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

ತಾಲೂಕಿನ ಸಾಂಬ್ರಾ ಗ್ರಾಮದ ಮಾರುತಿ ಗಲ್ಲಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಕರೆವ್ವದೇವಿ ದೇವಸ್ಥಾನದ ನೂತನ ಕಟ್ಟಡದ ವಾಸ್ತುಶಾಂತಿ, ಕಳಸಾರೋಹಣ ಹಾಗೂ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಯಲ್ಲಿ ಯಾರು ಮತ ಹಾಕಿದ್ದಾರೆ. ಯಾರು ಮತ ಹಾಕಿಲ್ಲ ಎಂಬುದನ್ನು ನೋಡದೇ, ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.

ೇತ್ರದಲ್ಲಿ ದೇವಾಲಯಗಳ ಅಭಿವೃದ್ಧಿಗೆ 100 ಕೋಟಿ ರೂ. ನೀಡಿದ್ದೇನೆ. ಇದುವರೆಗೂ 140 ದೇವಸ್ಥಾನಗಳ ಜೀಣೋರ್ದ್ಧಾರ ಮಾಡಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ಜಾತಿ, ಭಾಷೆ, ರಾಜಕಾರಣ ಮಾಡಿಲ್ಲ. ೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ೇತ್ರದ ಜನರಿಗೆ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದ್ದೇನೆ ಎಂದು ವಿವರಿಸಿದರು.

ಶಾಂತಾರಾಮ ಲೋಹಾರ, ಈರಪ್ಪ ಸುಳೇಭಾವಿ, ನಾಗೇಶ ದೇಸಾಯಿ, ರಚನಾ ಗಾವಡೆ, ಕಾಶೀನಾಥ ಧರ್ಮೋಜಿ, ಸದು ಪಾಟೀಲ, ಕಲ್ಲವ್ವ ಕವೇಗಾರ, ದೇವಕಿ ಶೋಗಣಿ, ಸಪ್ನಾ ತಳವಾರ, ಸುಲೋಚನಾ ಜೋಗಾಣಿ, ಭುಜಂಗ ಗಿರಮಲ, ಸಂಜು ಕಾಂಬಳೆ, ಭರಮಾ ಚಿಂಗಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net