ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ವರುಣನ ಆರ್ಭಟ, ಕೆರೆ, ಕಟ್ಟೆಗಳಿಗೆ ಜೀವ ಕಳೆ

250720 Siriguppa Karuru Dodda Hall
ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ಹತ್ತಿರ ಇರುವ ದೊಡ್ಡ ಹಳ್ಳ ತುಂಬಿ ಹರಿಯುತ್ತಿರುವುದು.
Published on

ಬಳ್ಳಾರಿ: ಜಿಲ್ಲಾದ್ಯಂತ ಶುಕ್ರವಾರ ರಾತ್ರಿ ಸುರಿದ ಮಳೆಯ ಆರ್ಭಟಕ್ಕೆ ಕೆರೆ, ಕಟ್ಟೆಗಳು ತುಂಬಿ ಹರಿದಿವೆ. ಸಂಡೂರು, ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ಸುರಿದಿದ್ದು, ಉಳಿದ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.

ಒಂದು ತಿಂಗಳಿಂದ ಮುಂಗಾರು ಮಳೆ ಉತ್ತಮವಾಗುತ್ತಿದ್ದು, ರೈತನ ಮೊಗದಲ್ಲಿ ಸಂತಸ ಮೂಡಿದೆ. ಅದರಲ್ಲೂ ಇತ್ತೀಚೆಗೆ ವಿವಿಧ ಬೆಳೆ ಬಿತ್ತಿದ ಖುಷ್ಕಿ ಜಮೀನಿನ ರೈತರು ಸಂತಸಗೊಂಡಿದ್ದು, ಉತ್ತಮ ಫಸಲು ಬರುವ ನಿರೀಕ್ಷೆ ಹೊಂದಿದ್ದಾರೆ. ಬಳ್ಳಾರಿ 12.2 ಮಿಮೀ ಮಳೆಯಾದರೆ, ಹಡಗಲಿ 16.2, ಹಗರಿಬೊಮ್ಮನಹಳ್ಳಿ 53.6, ಹರಪನಹಳ್ಳಿ 17.2, ಹೊಸಪೇಟೆ 82, ಕೂಡ್ಲಿಗಿ 79, ಸಂಡೂರು 90, ಸಿರಗುಪ್ಪ 65 ಮಿಮೀ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net