ಮೈಂದಡ್ಕ-ದರ್ಬೆ ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭ

Upp_road Work
Published on

ಉಪ್ಪಿನಂಗಡಿ: ಸಂಚಾರಕ್ಕೆ ಸಂಕಷ್ಟ ಪಡುವಂತಾಗಿದ್ದ 34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಮೈಂದಡ್ಕ-ದರ್ಬೆ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಾಸಕರಾದ ಅಶೋಕ್ ಕುಮಾರ್ ರೈ ನೀಡಿದ 30 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಶುಕ್ರವಾರ ಆರಂಭಗೊಂಡಿದೆ.

ಮೈಂದಡ್ಕ-ದರ್ಬೆ ರಸ್ತೆಯ ಡಾಂಬರು ಸಂಪೂರ್ಣ ಎದ್ದು ಹೋಗಿದ್ದರಿಂದ ರಸ್ತೆಯಿಡೀ ಜಲ್ಲಿ ಕಲ್ಲುಗಳೇ ಹರಡಿಕೊಂಡಿತ್ತಲ್ಲದೆ, ಅಲ್ಲಲ್ಲಿ ಹೊಂಡ-ಗುಂಡಿಗಳು ನಿರ್ಮಾಣವಾಗಿತ್ತು. ಇದರಿಂದ ಈ ರಸ್ತೆಯ ಮೂಲಕ ಸಾಗುವ ವಾಹನ ಸವಾರರು ಸಂಕಷ್ಟ ಅನುಭವಿಸುವ ಸ್ಥಿತಿ ಬಂದೊದಗಿತ್ತು.

ಈ ರಸ್ತೆಯನ್ನು ದುರಸ್ತಿಗೊಳಿಸಲು ಹಲವು ವರ್ಷಗಳಿಂದ ಈ ಭಾಗದ ಜನರು ಬೇಡಿಕೆ ಸಲ್ಲಿಸುತ್ತಲೇ ಇದ್ದು, ಈ ಬಗ್ಗೆ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ 30 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದರು. ಸುದೀರ್ಘ ಮಳೆ ಸುರಿಯುತ್ತಿದ್ದ ಕಾರಣ ವಿಳಂಬವಾಗಿ ಆರಂಭವಾದ ಈ ಕಾಮಗಾರಿಯಲ್ಲಿ 4 ಮೀ. ಅಗಲದ ಹಾಗೂ 318 ಮೀ. ಉದ್ದದ ಕಾಂಕ್ರೀಟ್ ರಸ್ತೆಯಲ್ಲಿ ನಿರ್ಮಾಣವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net