

ಸಿಂಧನೂರು: ತಾಲೂಕಿನ ತುರ್ವಿಹಾಳದ ಅಮೋಘ ಸಿದ್ದೇಶ್ವರಮಠದಲ್ಲಿ ಶ್ರೀ ಕನಕಭವನ ಉದ್ಘಾಟನೆ ಅಂಗವಾಗಿ ಐದು ದಿನಗಳ ಅಧ್ಯಾತ್ಮ ಪ್ರವಚನ ಕಾರ್ಯಕ್ರಮಕ್ಕೆ ಕಾಗಿನೆಲೆ ಸಂಸ್ಥಾನ ಗುರುಪೀಠ ಹೊಸದುರ್ಗದ ಈಶ್ವರಾನಂದ ಸ್ವಾಮೀಜಿ ಚಾಲನೆ ನೀಡಿದರು.
ಇದನ್ನೂ ಓದಿ: ಡಿ.12ರಿಂದ ಮೈಬಿಲ್ಡ್-24 ವಸ್ತುಪ್ರದರ್ಶನ
ನಂತರ ಮಾತನಾಡಿ, ಮಠದ ಕಾರ್ಯಕ್ರಮಕ್ಕಾಗಿ ತುರ್ವಿಹಾಳ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಇದೆ. ಅಧ್ಯಾತ್ಮ ಪ್ರವಚನ ಆಲಿಸಿ, ಮನಸ್ಸು ಪರಿಶುದ್ಧಗೊಳಿಸಿಕೊಳ್ಳಲು ಎಲ್ಲರಿಗೂ ಅಧ್ಯಾತ್ಮದ ಅವಶ್ಯವಿದೆ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು. ವಿಜಯಪುರ ಸಿದ್ಧಲಿಂಗೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಅಮೋಘ ಸಿದ್ಧೇಶ್ವರ ಮಠದ ಮಾದಯ್ಯ ಗುರುವಿನ್, ಚಿದಾನಂದಯ್ಯ ಗುರುವಿನ್, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಶ್ರೀ ಸದ್ಗುರು ಸರ್ವೇಶ್ವರ ಮಠದ ಅಮರಗುಂಡಯ್ಯ ತಾತ, ಪುರವರ ಹಿರೇಮಠದ ಅಮರಗುಂಡಯ್ಯ ಶಿವಾಚಾರ್ಯರು,
ಮುದಿ ಸಂಗಯ್ಯ, ಬ್ರಹ್ಮಕುಮಾರಿ ಸವಿತಾ ಅಕ್ಕ, ಪ್ರಮುಖರಾದ ಕೆ.ಕರಿಯಪ್ಪ, ನಲ್ಲಾ ವೆಂಕಟೇಶ್ವರರಾವ್, ಮಲ್ಲನಗೌಡ ದೇವರಮನಿ, ಸಿದ್ದನಗೌಡ ತುರ್ವಿಹಾಳ, ಪಪಂ ಅಧ್ಯಕ್ಷ ಶಾಮೀದಸಾಬ್ ಚೌಧರಿ ಇತರರಿದ್ದರು.