

ಬಸವನಬಾಗೇವಾಡಿ: ಮೂಲನಂದೀಶ್ವರ ಜಾತ್ರೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಗಳು ನೆರೆದವರ ಮೈನವಿರೇಳಿಸಿದವು. ಪಂದ್ಯದಲ್ಲಿ ೫೦ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಿದ್ದರು. ಎರಡು ಸಾವಿರಕ್ಕೂ ಹೆಚ್ಚು ಜನ ಪಂದ್ಯಗಳನ್ನು ವೀಕ್ಷಿಸಿ ಕುಸ್ತಿಪಟುಗಳನ್ನು ಕೇಕೆ ಚಪ್ಪಾಳೆಗಳಿಂದ ಹುರಿದುಂಬಿಸಿದರು.
ಜಾತ್ರೆ ಕಮೀಟಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ನೇತೃತ್ವ ವಹಿಸಿದ್ದರು. ವಿಶ್ವನಾಥ ಹಾರಿವಾಳ, ರವಿ ಪಡಶೆಟ್ಟಿ, ಸಂಗಮೇಶ ಓಲೇಕಾರ, ದಯಾನಂದ ಜಲಗೇರಿ, ರವಿ ಹಂಚಗಿ ಮತ್ತಿತರರು ಇದ್ದರು. ವಿಜೇತ ಕುಸ್ತಿ ಪಟುಗಳಿಗೆ ಬಹುಮಾನ ವಿತರಿಸಲಾಯಿತು.
ಕುಸ್ತಿ ಪಂದ್ಯಾವಳಿಯಲ್ಲಿ ನೆರೆಯ ಮಹಾರಾಷ್ಟ್ರದ ಕುಸ್ತಿಪಟುಗಳು ಮತ್ತು ಕರ್ನಾಟಕದ ಕುಸ್ತಿಪಟುಗಳ ನಡುವೆ ಜಿದ್ದಾಜಿದ್ದಿ ನಡೆಯಿತು