ಕ್ರೀಡೆಯಿಂದ ಮನಸ್ಸು, ದೇಹ ಸದೃಢ

21 Dwd 5
Published on

ಧಾರವಾಡ: ಕ್ರೀಡೆಯಿಂದ ಮನಸ್ಸು, ದೇಹ ಸದೃಢವಾಗುತ್ತದೆ. ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ದೇಹ, ಮನಸ್ಸನ್ನು ಸದೃಢಗೊಳಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಮಹೇಶ್ವರಿ ಉದಗಟ್ಟಿ ಹೇಳಿದರು.
ನಗರದ ವನಿತಾ ಸೇವಾ ಸಮಾಜದ ವನಿತಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸತತ ಪರಿಶ್ರಮಮದಿಂದ ಸಾಧನೆ ಮಾಡಬಹುದು. ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದರೆ ಜಯ ನಿಶ್ಚಿತ ಎಂದರು.
ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್. ಪಾಟೀಲ ಮಾತನಾಡಿ, ಸಮಾನತೆ ಇರುವುದು ಕ್ರೀಡೆಯಲ್ಲಿ ಮಾತ್ರ. ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ಸಾಧನೆ ತೋರುತ್ತಿರುವುದು ಪ್ರಶಂಸನೀಯ ಎಂದರು.
ದೈಹಿಕ ಶಿಕ್ಷಣ ಶಿಕ್ಷಕಿ ಶಿಲ್ಪಾ ಚವರಿ ಪ್ರಮಾಣವಚನ ಬೋಧಿಸಿದರು. ಮಧುರಾ ಹೆಗಡೆ, ಸಂತೋಷ ಹುಲ್ಲೂರ, ಇತರರಿದ್ದರು. ಐ.ಎಚ್. ಪೂಜಾರ ಸ್ವಾಗತಿಸಿದರು. ಪ್ರತಿಭಾ ಪಾಟೀಲ ನಿರೂಪಿಸಿದರು. ಎಂ.ಬಿ. ಬಿರಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net