ಡಾ. ಪೂರ್ಣಿಮಾ, ಕವಿತಾ ಅಡೂರು ಸೇರಿ ನಾಲ್ವರಿಗೆ ‘ಮಿಂಚು ಶ್ರೀನಿವಾಸ’ ಪತ್ರಿಕಾ ಪ್ರಶಸ್ತಿ

Poornima Kavitha
Published on

ಬೆಂಗಳೂರು: ಧಾರವಾಡದ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನ (ಸಾಕಾರ) ಹಾಗೂ ಶಿವಮೊಗ್ಗದ ಮಿಂಚು ಶ್ರೀನಿವಾಸ ಕುಟುಂಬ ವರ್ಗ ಸ್ಥಾಪಿಸಿರುವ ‘ಮಿಂಚು ಶ್ರೀನಿವಾಸ ಪತ್ರಿಕಾ ಪ್ರಶಸ್ತಿ’ಗಳು ಪ್ರಕಟವಾಗಿವೆ.

ಹಿರಿಯ ಪತ್ರಕರ್ತೆ, ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರದ ಸಂಚಾಲಕಿ ಡಾ.ಆರ್. ಪೂರ್ಣಿಮಾ ‘ಮಿಂಚು ಶ್ರೀನಿವಾಸ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಮಂಕುತಿಮ್ಮನ ಕಗ್ಗದ ಪ್ರಸಿದ್ಧ ವಾಚಕಿ, ‘ವಿಜಯವಾಣಿ’ ಅಂಕಣಕಾರ್ತಿ ಪುತ್ತೂರಿನ ಕವಿತಾ ಅಡೂರು ಅವರು ಸಿ.ಆರ್. ಭಟ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ದತ್ತಾತ್ರೇಯ ಕುಲಕರ್ಣಿ ಶಿಕ್ಷಣ ಸಿರಿ ಪ್ರಶಸ್ತಿಗೆ ಧಾರವಾಡದ ಕವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರೀತಿ ಕಾಮತ್, ಎಂಎಲ್ ಜೋಶಿ ಉದಯೋನ್ಮುಖ ಕ್ರೀಡಾಪಟು ಪ್ರಶಸ್ತಿಗೆ ಮಲ್ಲಕಂಬ ಹಾಗೂ ಯೋಗಪಟು ಅನನ್ಯ ಹಿರೇಮಠ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಏ. 16ರಂದು ಸಂಜೆ 5.30ಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯಲಿದೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ, ಪತ್ರಕರ್ತೆ ರಶ್ಮಿ ಎಸ್., ಸಾಕಾರ ಸಂಸ್ಥೆ ಕಾರ್ಯಾಧ್ಯಕ್ಷೆ ಡಾ.ಸಿ.ಶುಭದಾ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net