ಕೋಟ್ಯಂತರ ರೂ. ವೌಲ್ಯದ ಮಾದಕ ವಸ್ತು ನಾಶ

3manju6
ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಎಸ್‌ವಿಪಿ ಕೆಮಿಕಲ್ಸ್ ಘಟಕದಲ್ಲಿ ಸೋಮವಾರ ಮಾದಕ ವಸ್ತುಗಳನ್ನು ನಾಶಪಡಿಸಿದರು. ಎ್.ಎಚ್.ಚಲವಾದಿ, ಹಣಮಂತಪ್ಪ ಭಜಂತ್ರಿ ಇತರರಿದ್ದರು.
Published on

ಬೆಳಗಾವಿ: ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ವಶಪಡಿಸಿಕೊಂಡಿರುವ ಕೋಟ್ಯಂತರ ರೂ. ವೌಲ್ಯದ ವಿವಿಧ ಮಾದರಿ ಮಾದಕ ವಸ್ತುಗಳನ್ನು ಅಬಕಾರಿ ಇಲಾಖೆ ಅಕಾರಿಗಳು ನಾಶಪಡಿಸಿದರು. ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಎಸ್‌ವಿಪಿ ಕೆಮಿಕಲ್ಸ್ ಘಟಕದಲ್ಲಿ ಸೋಮವಾರ ಅಬಕಾರಿ ಜಂಟಿ ಆಯುಕ್ತ ಎ್.ಎಚ್.ಚಲವಾದಿ ಸಮಕ್ಷಮದಲ್ಲಿ ಚಿಕ್ಕೋಡಿ 421.168 ಕೆಜಿ ಗಾಂಜಾ, 1,915 ಕೆಜಿ ಚರಸ್, ಬಾಗಲಕೋಟೆ ಜಿಲ್ಲೆ 78 ಕೆಜಿ ಗಾಂಜಾ, ವಿಜಯಪುರ ಜಿಲ್ಲೆಯ 90.44 ಅಫೀಮು, 106.732 ಕೆಜಿ ಗಾಂಜಾ, ಪೋಪಿ ಸೀಡ್ಸ್ ನಾಶಪಡಿಸಿದರು. ವಿಜಯಪುರ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಮುರಳೀಧರ, ಚಿಕ್ಕೋಡಿ ಜಿಲ್ಲೆಯ ಅಬಕಾರಿ ಉಪ ಆಯುಕ್ತೆ ಸ್ವಪ್ನ ಬಾಗಲಕೋಟೆ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಹಣಮಂತಪ್ಪ ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net