ಕಬ್ಬಿಣ ಅಂಗಡಿಗಳಲ್ಲಿ ಲಕ್ಷಾಂತರ ರೂ. ಕಳವು

24Kdr10
Published on

ಕಡೂರು: ಕಡೂರು-ಬೀರೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಮೀಪದ ಎರಡು ಕಬ್ಬಿಣ ಅಂಗಡಿಗಳ ಮಳಿಗೆಗಳಲ್ಲಿ ಲಕ್ಷಾಂತರ ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಪಟ್ಟಣದ ಉಳುಕಿನ ಕಲ್ಲು ಸಮೀಪದ ಎಒನ್ ಐರನ್ಸ್ ಅಂಡ್ ಸ್ಟೀಲ್ಸ್ ಮತ್ತು ಬಾಬಾ ರಾಮದೇವ್ ಸ್ಟೀಲ್ಸ್ ಕಬ್ಬಿಣದ ಅಂಗಡಿ ಮಳಿಗೆಗಳ ಶೀಟ್ ಒಡೆದು ಒಳನುಗ್ಗಿ ಎಒನ್ ಐರನ್ಸ್ ಮಳಿಗೆಯಲ್ಲಿದ್ದ ಸುಮಾರು 1.5 ಲಕ್ಷ ಹಣ ಹಾಗೂ ಸಿಸಿ ಟಿವಿ ಕ್ಯಾಮೆರಾದ ಹಾರ್ಡ್‌ಡಿಸ್ಕ್ ಕೊಂಡೊಯ್ದಿದ್ದಾರೆ.

ಬಾಬಾ ರಾಮದೇವ್ ಮಳಿಗೆ ಬೀಗ ಒಡೆದು ಸುಮಾರು 5 ಸಾವಿರ ನಗದು ದೋಚಿದ್ದಾರೆ. ಅಂಗಡಿ ಒಳಗೆ ಕೆಲಸಗಾರರು ಮಲಗಿದ್ದರೂ ಅವರಿಗೆ ಕಳ್ಳರು ಒಳಬಂದಿರುವುದು ತಿಳಿದಿಲ್ಲ. ಇಲ್ಲಿರುವ ಸಿಸಿ ಟಿವಿ ಕ್ಯಾಮೆರಾ ಹಾರ್ಡ್‌ಡಿಸ್ಕ್ ತೆಗೆಯಲು ಕಳ್ಳರು ಪ್ರಯತ್ನಿಸಿದರೂ ಸಲವಾಗದೆ ಪರಾರಿಯಾಗಿದ್ದಾರೆ.

ರಾತ್ರಿ 1 ಗಂಟೆ ವೇಳೆ ಇಬ್ಬರು ಯುವಕರು ಕೈಯಲ್ಲಿ ಕಾರದ ಪುಡಿ ಮತ್ತು ಚಾಕು ಹಿಡಿದಿದ್ದಾರೆ. ಮುಖದ ಚಹರೆ ತಿಳಿಯದಂತೆ ಬಟ್ಟೆ ಸುತ್ತಿ ಹೆಲ್ಮೆಟ್ ಧರಿಸಿದ್ದಾನೆ. ಸ್ಥಳಕ್ಕೆ ಕಡೂರು ವೃತ್ತ ನಿರೀಕ್ಷಕ ರಫೀಕ್ ಮತ್ತು ಪಿಎಸ್‌ಐ ಪವನ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net