ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ, ನಗದು ಕಳವು

Crime Logo
Published on

ಮೈಸೂರು: ವಿದೇಶಕ್ಕೆ ತೆರಳಿದ್ದ ಕುಟುಂಬದವರ ಮನೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿದ್ದಾರೆ.
ರಾಜೀವ್‌ನಗರದ ರೆಹಮಾನ್ ಮನೆಯಲ್ಲಿ ಕಳ್ಳತನವಾಗಿದ್ದು, 1.41 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದೆ.
ರೆಹಮಾನ್ ಆ.2ರಂದು ಮನೆಗೆ ಬೀಗ ಹಾಕಿಕೊಂಡು ಜರ್ಮನ್‌ಗೆ ತೆರಳಿದ್ದರು. ಈ ಅವಧಿಯಲ್ಲಿ ಮನೆ ಬಾಗಿಲು ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಆ.18ರಂದು ಅವರ ಪಕ್ಕದವರು ಮೊಬೈಲ್‌ಗೆ ಕರೆ ಮಾಡಿ, ಕಳ್ಳತನವಾಗಿರುವ ವಿಷಯ ತಿಳಿಸಿದ್ದಾರೆ. ರೆಹಮಾನ್ ಅವರ ಭಾವ ಹೋಗಿ ಪರಿಶೀಲಿಸಿದಾಗ ಕಳ್ಳತನವಾಗಿದ್ದು,ಈ ಬಗ್ಗೆ ಉದಯಗಿರಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತೊಂದು ಮನೆಗಳ್ಳತನ:
ರಮಾಬಾಯಿನಗರ ಬಳಿಯ ಗ್ರೀನ್ ಬಡಾವಣೆಯ ಎಂ.ಕೆ.ಶಶಿಧರ್ ಅವರ ಮನೆಯಲ್ಲಿ ಬಾಗಿಲು ಬೀಗ ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 1.84 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ಕುಟುಂಬದೊಂದಿಗೆ ಆ.8 ರಂದು ಊರಿಗೆ ತೆರಳಿದ್ದು, ಆ.17 ರಂದು ವಾಪಸ್ ಮನೆಗೆ ಬಂದ ವೇಳೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಮಾಲೀಕರು ನೀಡಿದ ದೂರಿನ ಮೇರೆಗೆ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net