

ಗೋಕಾಕ: ನಾಗರ ಪಂಚಮಿ ಹಬ್ಬದ ಹೆಸರಿನಲ್ಲಿ ಜನರು ಪ್ರತಿವರ್ಷ ಹುತ್ತ ಮತ್ತು ಕಲ್ಲು ನಾಗನಿಗೆ ಹಾಲು, ನೆವೇದ್ಯ ಅರ್ಪಿಸಿ ಪೌಷ್ಟಿಕ ಆಹಾರ ವ್ಯರ್ಥ ಮಾಡಲಾಗುತ್ತಿದ್ದು, ಲಕ್ಷಾಂತರ ಲೀಟರ್ ಹಾಲು ಮಣ್ಣುಪಾಲು ಆಗುತ್ತಿದೆ ಎಂದು ಜನಪದ ತ ಡಾ.ಸಿ.ಕೆ.ನಾವಲಗಿ ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶೂನ್ಯ ಸಂಪಾದನ ಮಠ, ಬಸವ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ, ವಚನ ಸಾಹಿತ್ಯ ಚಿಂತನ, ಮಂಥನ ವೇದಿಕೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಬಸವ ಪಂಚಮಿ ನಿಮಿತ್ತ ರೋಗಿಗಳಿಗೆ ಹಾಲು ವಿತರಿಸಿ ಮಾತನಾಡಿದರು. ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರ, ಅಂಧಶ್ರದ್ಧೆ ವಿರುದ್ಧ ಜಾಗತಿ ಮೂಡಿಸುವ ಕೆಲಸ ಆಗಬೇಕಿದೆ ಬುದ್ಧ, ಬಸವ, ಅಂಬೇಡ್ಕರ್ ಸಾರಿದ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮೌಢ್ಯಾಚರಣೆಗಳು ತೊಲಗಲಿವೆ. ಮುರುರಾಜೇಂದ್ರ ಸ್ವಾಮೀಜಿ ಇದಕ್ಕಾಗಿ ಜನಜಾಗತಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶೂನ್ಯ ಸಂಪಾದನ ಮಠದ ಮುರುರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಪವನಕುಮಾರ, ಡಾ.ಗೋಪಾಲ ಹೊಂಗಲ, ಡಾ.ಕಿರಣ ಕುಮಾರ, ಡಾ.ಸಂಜೀವಿನಿ ಉಮರಾಣಿ, ಬಸನಗೌಡ ಪಾಟೀಲ, ಬಸವರಾಜ ಖಾನಪ್ಪನವರ, ಎಸ್.ಕೆ.ಮಠದ, ಬಸವರಾಜ ಹತ್ತರಕಿ, ಮೆಲಾರಲಿಂಗ ಉಪ್ಪಿನ, ಶಂಕರ ಗೋರೋಶಿ, ಪ್ರಶಾಂತ ಕರುಬೇಟ, ಭಾರತಿ ಮರೆನ್ನವರ, ಕಾಳಪ್ಪ ಗುರಾಣಿ, ಮಲ್ಲೇಶ ಆಡಿನ್, ನಾಗರಾಜ ಶೀಗಿಹಳ್ಳಿ, ಮಲ್ಲಿಕಾರ್ಜುನ ಈಟಿ ಹಾಗೂ ಇತರರಿದ್ದರು.