

ಧಾರವಾಡ: ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ, ಎನ್.ಎಸ್.ಎಸ್, ಎನ್.ಸಿ.ಸಿ, ಯುವ ರೆಡ್ ಕ್ರಾಸ್, ರೇಂರ‍್ಸ್ ರೋರ‍್ಸ್ ಹಾಗೂ ಗ್ರಂಥಾಲಯ ವಿಭಾಗಗಳ ಸಹಯೋಗದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲಾಗಿತ್ತು.
ಪ್ರಾಧ್ಯಾಪಕರು ಮತ್ತು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದರು. ಯುವಕ- ಯುವತಿಯರು ಸಿರಿಧಾನ್ಯಗಳ ತಿಂಡಿಗಳ ಅಂಗಡಿಗಳನ್ನು ಸ್ಥಾಪಿಸಿ ತಿಂಡಿಗಳನ್ನು ಮಾರಾಟ ಮಾಡಿದರು.
ಗ್ರಾಮೀಣಾಭಿವೃದ್ಧಿ ತಜ್ಞ ಡಾ. ಪ್ರಕಾಶ್ ಭಟ್ ಪರಿಸರದ ಮಹತ್ವ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಪ್ರಾಚಾರ್ಯೆ ಪ್ರೊ. ನಳಿನಿ ಬೆಂಗೇರಿ ಅಧ್ಯಕ್ಷತೆ ವಹಿಸಿದ್ದರು. ಕಲ್ಚರಲ್ ಸೊಸೈಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ, ಡಾ. ಶಿವಾನಂದ ನರಹಟ್ಟಿ, ಡಾ. ಗಿರೀಶ ದೇಸೂರ, ಡಾ. ಜಿ.ಕೆ. ಬಡಿಗೇರ, ವಿದ್ಯಾ ರಾಯ್ಕರ್, ಪ್ರೊ. ಸಂಜೋತ ಶಿರಸಂಗಿ, ಪ್ರೊ. ಲತಾ ಪಾಟೀಲ, ಪ್ರಕಾಶ ಬಾಳಿಕಾಯಿ, ಶಿವಾಜಿ ಎನ್.ಕೆ., ಡಾ. ಬಿ.ಎಸ್. ತಲ್ಲೂರ, ಗೌತಮ ರೆಡ್ಡಿ ಸ್ವಾಗತಿಸಿದರು ಇದ್ದರು.