ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರಗೆ ಹಾಲುಮತದ ಬೆಂಬಲ

Raju Alagur
Published on

ವಿಜಯಪುರ: ಮಾದಿಗ, ಬಂಜಾರಾ, ಬಣಜಿಗ ಸೇರಿದಂತೆ ಹಲವು ಸಮುದಾಯಗಳು ಬೆಂಬಲ ಸೂಚಿಸಿದ ಬೆನ್ನಲ್ಲೇ ಹಾಲುಮತ ಸಮಾಜ ಕೂಡ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದು, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ರಾಜು ಆಲಗೂರ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದೆ.
ಇಲ್ಲಿನ ಪಾಟೀಲ ಗಾರ್ಡೇನಿಯಾದಲ್ಲಿ ಹಮ್ಮಿಕೊಂಡಿದ್ದ ಹಾಲುಮತ ಸಮಾಜದ ಸಭೆಯಲ್ಲಿ ಹಲವು ಮುಖಂಡರುಗಳು ಒಕ್ಕೋರಲಿನಿಂದ ಬೆಂಬಲ ಸೂಚಿಸುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಥಮ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಗ್ಯಾರಂಟಿ ಯೋಜನೆಗಳು ರಾಜ್ಯದ ಮೂಲೆ-ಮೂಲೆಯ ಪ್ರತಿಯೊಂದು ಸಮಾಜದ ಬಡವರಿಗೆ, ಅಹಿಂದ ವರ್ಗಕ್ಕೆ, ರೈತರಿಗೆ, ಬಿಪಿಎಲ್ ಕುಟುಂಬದವರಿಗೆ ತಲುಪುತ್ತಲಿವೆ. ಇದರಿಂದ ಪ್ರತಿಯೊಂದು ಫಲಾನುಭವಿಯ ಮತವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬರುತ್ತವೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.

ಎಚ್.ಆರ್. ಆಲಗೂರ ಮತಯಾಚನೆ ಮಾಡಿದರು. ಪ್ರೊ.ಎಂ.ಜಿ. ಯಂಕಂಚಿ, ರಾಮಣ್ಣ ಮೆಂಡೆಗಾರ, ಗುರುನಗೌಡ ಪಾಟೀಲ, ಮಲ್ಲಣ್ಣ ಸಾಲಿ, ಬಿ.ಸಿ. ಸಾವುಕಾರ, ಜಟ್ಟೆಪ್ಪ ರವಳಿ, ರಮೇಶ ಬಂಟನೂರ, ಸತೀಶಕುಮಾರ ಅಡವಿ, ಬೀರಪ್ಪ ಜುಮನಾಳ, ಮಲ್ಲಣ್ಣ ಶಿರಶ್ಯಾಡ, ಶ್ರೀಶೈಲ ಕವಲಗಿ, ಕಾಮೇಶ ಉಕ್ಕಲಿ, ಮಲ್ಲಿಕಾರ್ಜುನ ಮದರಿ, ಬಿ.ಕೆ. ಬಿರಾದಾರ, ಸೋಮನಾಥ ಕಳ್ಳಿಮನಿ, ಗೌರಮ್ಮ ಮುತ್ತತ್ತಿ, ಮೋಹನ ದಳವಾಯಿ, ಸಿದ್ದು ಗೌಡನವರ, ನೀಲಕಂಠ ರೂಗಿ, ರಮೇಶ ಪೂಜಾರಿ, ಮೋಹನ ಮೇಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net