ಹಾಲಿನ 5 ರೂ. ಪ್ರೋತ್ಸಾಹಧನ ಖಾತೆಗೆ ಜಮೆ

sirsi sureshchandra
Published on

ಶಿರಸಿ: ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡುವ 5 ರೂ. ಪ್ರೋತ್ಸಾಹ ಧನದ ಡಿಸೆಂಬರ್ ಮಾಹೆಯ ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ವರ್ಷದ ಜನವರಿಯಿಂದ ಏಪ್ರಿಲ್ ವರೆಗಿನ ರೂ. 5 ಪ್ರೋತ್ಸಾಹಧನ ಹಾಲು ಉತ್ಪಾದಕ ರೈತರ ಖಾತೆಗೆ ಸರ್ಕಾರದಿಂದ ಜಮಾ ಆಗಬೇಕಾಗಿದೆ. ಡಿಸೆಂಬರ್ ತಿಂಗಳ ಪ್ರೋತ್ಸಾಹ ಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೆ ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂರ್ಪಸಲು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net