ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

07-GPT-2
Published on

ಗುಂಡ್ಲುಪೇಟೆ: ತಾಲೂಕಿನ ಲಕ್ಕೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಶಿವರುದ್ರಪ್ಪ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಂಜಪ್ಪ 8 ಮತಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ಚಂದ್ರು(4) ಮತ ಪಡೆದುಕೊಂಡರು. ಉಪಾಧ್ಯಕ್ಷರಾಗಿ ಶಿವರುದ್ರಪ್ಪ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಪದ್ಮನಾಭ ಕಾರ್ಯನಿರ್ವಹಿಸಿದರು.
ನಿರ್ದೇಶಕರಾದ ನಾಗಭೂಷಣ, ನಂದೀಶ್, ಗುರುನಂಜಪ್ಪ, ನಟರಾಜು, ಮಂಗಳಮ್ಮ, ಮಣಿಯಮ್ಮ, ಚನ್ನಶೆಟ್ಟಿ, ಸಿದ್ದಯ್ಯ, ಮುಖ್ಯಕಾರ್ಯನಿರ್ವಾಹಕ ರವೀಂದ್ರ ಹಾಗೂ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net