ಹಾಲು ಉತ್ಪಾದಕರ ಸಂಘ ಅಭಿವೃದ್ಧಿ ಹೊಂದಲಿ

web5
ಮುಗಳಿಹಾಳದಲ್ಲಿ ಏರ್ಪಡಿಸಿದ್ದ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಸ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಅವರನ್ನು ಗಣ್ಯರು ಸನ್ಮಾನಿಸಿದರು. ಪ್ರವೀಣ ಹುಡೇದ, ಶಂಕರ ಇಟ್ನಾಳ, ಯಾಸೀನ್ ಮುಲ್ಲಾ , ರವಿ ತಳವಾರ, ಪ್ರಕಾಶ ವಾಲಿ, ಭೀಮಶೆಪ್ಪ ದಳವಾಯಿ ಇತರರಿದ್ದರು.
Published on

ಮುಗಳಿಹಾಳ: ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ 2023-2024ನೇ ಸಾಲಿನ ವಾರ್ಷಿಕ ಸಭೆಯನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು.

ವಿಶ್ವಾಸ ವೈದ್ಯ ಮಾತನಾಡಿ, ಸಹಕಾರಿ ಸಂಘ ಉತ್ತರೋತ್ತರವಾಗಿ ಬೆಳೆಯಲು ಎಲ್ಲರೂ ಸಹಕರಿಸಬೇಕು. ಸಂಘಕ್ಕೆ ಬೇಕಾದ ಸೌಲಭ್ಯಗಳನ್ನು ನಾನು ಒದಗಿಸುತ್ತೇನೆ ಎಂದರು. ಬೆಮುಲ್ ಉಪವ್ಯವಸ್ಥಾಪಕ ಪ್ರವೀಣ ಹುಡೇದ ಮಾತನಾಡಿ, ಮುಗಳಿಹಾಳ ಸಂಘವು ಸವದತ್ತಿ ತಾಲೂಕಿನಲ್ಲಿ ಬಹಳ ವರ್ಷಗಳಿಂದ ಪ್ರಥಮ ಸ್ಥಾನ ಪಡೆದುಕೊಂಡು ಬಂದಿದೆ. ಜಿಲ್ಲಾಮಟ್ಟದಲ್ಲೂ ಪ್ರಥಮ ಸ್ಥಾನ ಪಡೆಯಲು ಹಾಲು ಉತ್ಪಾದಕರ ಸಹಕಾರ ಮುಖ್ಯ ಎಂದು ಮಾತನಾಡಿದರು.

ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಬೆಳಗಾವಿ ಕೆಎಂಎ್ ಉಪವ್ಯವಸ್ಥಾಪಕ ಯಾಸೀನ್ ಮುಲ್ಲಾ, ವಿಸ್ತರಣಾಧಿಕಾರಿ ರವಿ ತಳವಾರ, ಪ್ರಕಾಶ ವಾಲಿ, ಪಿಕೆಪಿಎಸ್ ಅಧ್ಯಕ್ಷ ಭೀಮಶೆಪ್ಪ ದಳವಾಯಿ, ಪಿಡಿಒ ಅಮಿತ ನಾಯಿಕ್, ರಾಮಣ್ಣ ದಳವಾಯಿ, ಬಸಪ್ಪ ಅರಬಾವಿ, ವಿಠ್ಠಲ ದಳವಾಯಿ, ಎಪಿಎಂಸಿ ಸದಸ್ಯರಾದ ಲಕ್ಷ್ಮಣ ದಳವಾಯಿ, ಗೋವಿಂದಪ್ಪ ಮುರಗಟ್ಟಿ, ಈಶ್ವರ ಹಸಬಿ, ಮುತ್ತು ಅಣ್ಣಿಗೇರಿ, ಸಿದ್ದಪ್ಪ ಕೊಪ್ಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net