ಶೀಘ್ರದಲ್ಲೇ ಹಾಲಿನ ದರ ಹೆಚ್ಚಳ:ಸಚಿವ ಕೆ.ವೆಂಕಟೇಶ್​ ಮಾಹಿತಿ

1355234-k-venkatesh
Published on

ಬೆಂಗಳೂರು:ರೈತರ ಬೇಡಿಕೆ ಹಾಗೂ ಗ್ರಾಹಕರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಹಾಲಿನ ದರ ಹೆಚ್ಚಳ ಮಾಡಲು ಅನುಮೋದನೆ ನೀಡುವುದಾಗಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್​ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪ ಅವಧಿಯಲ್ಲಿ ಕಾಂಗ್ರೆಸ್​ನ ಉಮಾಶ್ರೀ, ಬಿಜೆಪಿಯ ಡಾ.ಎಂ.ಜಿ.ಮುಳೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಲಿನ ಖರೀದಿ ದರ ಹೆಚ್ಚಿಸುವ ಸಂಬಂಧ ಇರುವ ಸಾಧಕ-ಭಾದಕಗಳ ಎಲ್ಲ ಒಕ್ಕೂಟಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಹಾಲು ಮಹಾಮಂಡಳದ ಅಧ್ಯಕ್ಷರು ಸೇರಿ ಇತರರ ಜೊತೆ ಒಂದು ಸುತ್ತಿನ ಸಭೆ ನಡೆಸಿ ಚರ್ಚಿಸಲಾಗಿದೆ. ಎಷ್ಟು ದರ ಹೆಚ್ಚಿಸಬೇಕೆಂಬ ಕುರಿತು ಸಿಎಂ ಜೊತೆ ಅಂತಿಮವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಪ್ರಸಕ್ತ ಸಾಲಿಗೆ ಪ್ರತಿ ಕ್ವಿಂಟಾಲ್​ ಮೆಕ್ಕೆಜೋಳವನ್ನು ಎಂಎಸ್​ಪಿ ದರದಂತೆ 2,225 ರೂ ಹಾಗೂ 175 ರೂ.ಪೋತ್ಸಾಹ ಧನ ಸೇರಿ ಒಟ್ಟು ರೂ.2,400 ರೂ. ನೀಡಿ ರೈತರಿಂದ ನೇರವಾಗಿ ಖರೀದಿಸಲಾಗುತ್ತಿದೆ. ಮೆಕ್ಕೆಜೋಳ ಖರೀದಿ ವೇಳೆ ಬಯೋಮೆಟ್ರಿಕ್​ ಕಡ್ಡಾಯಗೊಳಿಸಲಾಗಿದೆ ಎಂದರು.

656 ಕೋಟಿ ರೂ.ಬಾಕಿ: 90,4547 ಫಲಾನುಭವಿಗಳಿಗೆ ಪಾವತಿಸಬೇಕಿದ್ದ ಒಟ್ಟು 656 ಕೋಟಿ ರೂ.ಪ್ರೋತ್ಸಾಹ ಧನ ಬಾಕಿ ಇದೆ. ಸಾಮಾನ್ಯ ವರ್ಗದ 81,7074 ಮಂದಿ, ಪರಿಶಿಷ್ಟ ಜಾತಿಯ 52467 ಮಂದಿ ಹಾಗೂ ಪರಿಶಿಷ್ಟ ಪಂಗಡದ 35,006 ಹಾಲು ಉತ್ಪಾದಕರಿಗೆ 4 ತಿಂಗಳಿಂದ ಬಾಕಿ ಹಣವನ್ನು ಪಾವತಿಸಬೇಕಾಗುತ್ತದೆ. ಆದರೆ, ಪ್ರತಿವರ್ಷ ಹಾಲು ಉತ್ಪಾದನೆ ಹೆಚ್ಚುತ್ತಿರುವುದು ಮತ್ತು ಬೇಡಿಕೆ ತಕ್ಕಂತೆ ಬಜೆಟ್​ ಇಡದಿರುವ ಕಾರಣದಿಂದ ಹಣ ಪಾವತಿಗೆ ವಿಳಂಬವಾಗುತ್ತಿದೆ. ಪೋತ್ಸಾಹಧನ ನೀಡಲು ಹೆಚ್ಚುವರಿ ಅನುದಾನ ಅವಶ್ಯವಿದ್ದು, ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಸಿಎಂ ಗಮನಕ್ಕೂ ಸಹ ತರಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಬಾಕಿ ಹಣವನ್ನು ಪಾವತಿಸುವುದಾಗಿಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net