ಹಾಲಿನ ಪ್ರೋತ್ಸಾಹ ದರ ಯೋಜನೆ ದಿನಾಂಕ ವಿಸ್ತರಣೆ

Published on

ಹಾವೇರಿ: ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಮಾ.31ರವರೆಗೆ ಘೋಷಿಸಿದ್ದ ಹೆಚ್ಚುವರಿ 3 ರೂ. ಹಾಲು ಶೇಖರಣಾ ದರ ನೀಡುವ ಯೋಜನೆಯನ್ನು ಜೂನ್ 15ರವರೆಗೆ ವಿಸ್ತರಿಸಿದೆ.
ಅತಿವೃಷ್ಠಿ, ಮೇವಿನ ಕೊರತೆ, ಪಶು ಆಹಾರದ ಬೆಲೆ ಹೆಚ್ಚಳ ಹಾಗೂ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ನೆರವಿಗಾಗಿ ಫೆಬ್ರವರಿ 1ರಿಂದ ಮಾ.31ರವರೆಗೆ ಪ್ರತಿ ಲೀಟರ್‌ಗೆ 3 ರೂ. ಪ್ರೋತ್ಸಾಹ ಧನ ನೀಡುವುದಾಗಿ ಒಕ್ಕೂಟ ಘೋಷಿಸಿತ್ತು. ಈಗ ಜಾರಿಯಲ್ಲಿರುವ ಹಾಲು ಖರೀದಿ ದರ, ದರಪಟ್ಟಿಗಳು, ಷರತ್ತು ಹಾಗೂ ನಿಬಂಧನೆಗಳನ್ನು ಜೂನ್ 15ರವರೆಗೆ ಮುಂದುವರಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net