

ಬೂದಿಕೋಟೆ: ಆಲಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಕ್ಕೆ ಅಧ್ಯಕ್ಷರಾಗಿ ಆರ್.ಸುರೇಶ್ ಉಪಾಧ್ಯಕ್ಷರಾಗಿ ಶಿವಣ್ಣ ಅವಿರೋಧ ಆಯ್ಕೆಯಾದರು.
ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಆಲಂಬಾಡಿ ಹಾಲು ಉತ್ಪಾದಕರ ಸಹಕಾರ ಸಂದ ಆಡಳಿತ ಮಂಡಳಿ ಇತ್ತೀಚೆಗೆ ಅವಿರೋಧ ಆಯ್ಕೆಯಾಗಿತ್ತು. ಅಧ್ಯಕ್ಷರಾಗಿ ಆರ್.ಸುರೇಶ್ ಉಪಾಧ್ಯಕ್ಷರಾಗಿ ಶಿವಣ್ಣ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಾಲಕೃಷ್ಣಪ್ಪ ಭಾನುವಾರ ಫಲಿತಾಂಶ ಘೋಷಣೆ ಮಾಡಿದರು.
ಅಧ್ಯಕ್ಷ ಆರ್.ಸುರೇಶ್ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಗ್ರಾಮದಲ್ಲಿ ಹಾಲಿನ ಡೇರಿ ಇರಲಿಲ್ಲ. ಮುಂದೆ ನಿಂತು ರೈತರ ಒಳಿತಿಗೆ ಹಾಲಿನ ಡೇರಿ ಆರಂಭಿಸಿದ್ದು, 25 ರಿಂದ 30 ಲೀ. ಹಾಲು ಶೇಖರಣೆ ಆಗುತ್ತಿತ್ತು. ಇದೀಗ 1,300 ಲೀ.ಹಾಲು ಉತ್ಪಾದನೆ ಆಗುವ ಹಂತಕ್ಕೆ ಸಂ ಬೆಳೆದಿದೆ. ಸಂಘ ಅಭಿವೃದ್ಧಿ ಕಾಣಲು ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಅವರ ಸಹಕಾರ ಬಹಳಷ್ಟಿದೆ ಎಂದರು.
ಸಂಘ ಉತ್ತಮ ಆದಾಯದಿಂದ ಬೆಳೆಯುತ್ತಿದ್ದು, ಹಾಲು ಉತ್ಪಾದಕರಿಗೆ ಒಕ್ಕೂಟ ಹಾಗೂ ಸಂದಿಂದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಂದೆಯೂ ಸಹ ಎಲ್ಲ ಆಡಳಿತ ಮಂಡಳಿಯ ಸಹಕಾರದಿಂದ ಸಂದ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ಉತ್ಪಾದಕರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕಾಲಕಾಲಕ್ಕೆ ಒದಗಿಸಲಾಗುತ್ತದೆ ಎಂದರು.
ಆಲಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಕ್ಕೆ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಸನ್ಮಾಸಿದರು. ಆಡಳಿತ ಮಂಡಳಿಯ ಸದಸ್ಯರಾದ ದೊಡ್ಡಮುನಿಯಪ್ಪ, ಡಿಸಿ.ನಾರಾಯಣಪ್ಪ ವೆಂಕಟೇಶಪ್ಪ, ಡಿಎಂ ನಾರಾಯಣಪ್ಪ, ಮುನಿಯಮ್ಮ, ಲಕ್ಷ$್ಮಮ್ಮ, ಅಮರಮ್ಮ, ನಾಗವೇಣಿ, ಪ್ರೇಮಾ, ಸಂದ ಕಾರ್ಯನಿರ್ವಾಹಕ ವೆಂಕಟರಾಜು, ಹಾಲುಪರೀಕ್ಷಕ ರವಿಕುಮಾರ್, ಚುನಾವಣಾಧಿಕಾರಿ ಬಾಲಕೃಷ್ಣಪ್ಪ, ಬೂದಿಕೋಟೆ ಡೇರಿ ಕಾರ್ಯನಿರ್ವಾಹಕ ಮುನಿರಾಜ್, ಮುಖಂಡರಾದ ನಾರಾಯಣಪ್ಪ, ಅಮರೇಶ್, ಮುನಿಯಪ್ಪ, ನಾರಾಯಣಸ್ವಾಮಿ ಇದ್ದರು.