ಸಮೃದ್ಧ ಬದುಕಿಗೆ ಹೈನೋದ್ಯಮ ವರದಾನ

milk can distribution
Published on

ಗ್ರಾಪಂ ಮಾಜಿ ಸದಸ್ಯ ಕೋಡಪ್ಪನಹಳ್ಳಿ ವೆಂಕಟೇಶ್ ಅಭಿಮತ

ರೈತರಿಗೆ ಹಾಲಿನ ಕ್ಯಾನ್ ವಿತರಣೆ


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗ್ರಾಮೀಣ ಭಾಗದ ಜನರಿಗೆ ಹೈನುಗಾರಿಕೆ ಸಂಜೀವಿನಿಯಾಗಿದೆ ಎಂದು ಗ್ರಾಪಂ ಮಾಜಿ ಸದಸ್ಯ ಕೋಡಪ್ಪನಹಳ್ಳಿ ವೆಂಕಟೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕುಲುಮೆಕೆಂಪಲಿಂಗನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಹಾಲಿನ ಕ್ಯಾನ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೈನುಗಾರಿಕೆ ಅವಲಂಬಿತ ಕುಟುಂಬಗಳು ಸಮೃದ್ಧಿಯಾಗಿವೆ. ಆರ್ಥಿಕ ಸಮಸ್ಯೆಗಳಿಂದಲೂ ಪಾರಾಗಿವೆ. ಗೋ ಮಾತೆಯನ್ನು ನಂಬಿ ಹೈನುಗಾರಿಕೆ ಆರಂಭವಿಸಿದ ಸಾಕಷ್ಟು ಮಂದಿ ಅರ್ಥಿಕವಾಗಿ ಸಬಲರಾಗಿದ್ದಾರೆ. ಯುವಜನತೆ ಉದ್ಯೋಗದ ಜತೆಗೆ ಹೈನುಗಾರಿಕೆ ಆರಂಭಿಸಿದರೆ ಸಹಕಾರ ಸಂಘದ ಉನ್ನತ ಸ್ಥಾನಕ್ಕೆ ಬೆಳೆಯುವ ಜತೆಗೆ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಬಹುದು ಎಂದರು.
ಹಾಲಿನ ಕ್ಯಾನ್ ವಿತರಣೆಗೆ ಸಹಕಾರ ನೀಡಿದ ಮುಖಂಡ ಬಿ.ಮುನಿರಾಮು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪದವಿ ಪಡೆದ ಬಹುತೇಕ ಯುವಜನತೆ ನಿರುದ್ಯೊಗಿಗಳಾಗಿಯೇ ಉಳಿದಿರುವುದು ಬೇಸರದ ಸಂಗತಿ. ಹಾಗಯೇ ಉದ್ಯೋಗಕ್ಕಾಗಿ ಕೈಗಾರಿಕೆಗಳನ್ನೇ ಅವಲಂಬಿಸಿರಿವುದು ವಿರ್ಯಾಸ. ಪ್ರಸ್ತುತ ಸನ್ನಿವೇಶದಲ್ಲಿ ಅನೇಕ ಕಾರಣಗಳಿಂದ ಕೈಗಾರಿಕೆಗಳು ಮುಚ್ಚುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಯವಜನತೆ ಹೈನುಗಾರಿಕೆ ಆರಂಭಿಸಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದರು.
ಗುಣಮಟ್ಟದ ಹಾಲು ಉತ್ಪಾದನೆ ಮಾಡಿದರೆ ಅಧಿಕ ಲಾಭಗಳಿಕೆಯ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬಹುದು ಎಂದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ಯಾನ್ ವಿತರಣೆ ಮಾಡಲಾಗುತ್ತಿದೆ ಎಂದರು.
ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಕೆ.ಎಚ್.ಲೋಕೇಶ್, ಉಪಾಧ್ಯಕ್ಷ ವೆಂಕಟೇಶಯ್ಯ, ನಿರ್ದೇಶಕರಾದ ಜಯಪ್ರಕಾಶ್, ವೆಂಕಟೇಶ್, ವೇಣುಗೋಪಾಲ್, ಉಮೇಶ್, ವೀರಾಂಜಿನಿಗೌಡ, ನಿರಂಜನ್‌ಕುಮಾರ್, ಶಿವಣ್ಣ, ಅನಸೂಯಾ, ಬೈಲ್ಲಮ್ಮ, ಮಾಜಿ ಅಧ್ಯಕ್ಷೆ ರಾಜೇಶ್ವರಿ, ನಿವೃತ್ತ ಮುಖ್ಯಶಿಕ್ಷಕ ಚಂದ್ರಯ್ಯ, ಮುಖಂಡರಾದ ಬಿ.ರಾಜಣ್ಣ, ಬಿ.ಬೈರಣ್ಣ, ಕೃಷ್ಣಯ್ಯ, ಗೋಪಿ, ಹರೀಶ್, ಮುನಿರಾಜು, ಮಂಜುನಾಥ್, ಗೋವಿಂದಪ್ಪ, ಕಾರ್ಯದರ್ಶಿ ಇಂದ್ರಕುಮಾರ್, ಹಾಲು ಪರೀಕ್ಷಕ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net