

ಕಿಕ್ಕೇರಿ: ಪರಿಶುದ್ಧ ಹಾಲಿಗೆ ಸಕ್ಕರೆ, ಯೂರಿಯಾ, ಉಪ್ಪು ಸೇರಿಸಿರುವುದು ಕಂಡು ಬಂದರೆ ದಂಡದೊಂದಿಗೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ಎಚ್ಚರಿಸಿದರು.
ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಹಾಲು ಉತ್ಪಾದಕರಿಗೆ ಗುರುವಾರ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಬದುಕು ಕಟ್ಟಿಕೊಟ್ಟಿದ್ದು ಹೈನುಗಾರಿಕೆ. ರಾಸುಗಳಿಗೆ ಶೇ.25ರಷ್ಟು ವಿಮೆ ಹಣವನ್ನು ರೈತರು ಪಾವತಿಸಿದರೆ, ಉಳಿಕೆ 75ರಷ್ಟು ಹಣವನ್ನು ಸಂಸ್ಥೆ ಭರಿಸಲಿದೆ. ರಾಸು ಒಂದು ವೇಳೆ ಮೃತಪಟ್ಟರೆ 60,000 ರೂ. ವಿಮೆ ಪಡೆಯಬಹುದಾಗಿದೆ ಎಂದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ಗುಣಮಟ್ಟದ ಹಾಲು ವಿತರಿಸುವ ರೈತರಿಂದ ಸಂಘದ ಕೀರ್ತಿ, ಅಭಿವೃದ್ಧಿ ಸಾಧ್ಯ ಎಂದರು.
ಗ್ರಾಪಂ ಸದಸ್ಯ ಎಸ್.ಕೆ.ಬಾಲಕೃಷ್ಣ, ಡೇರಿ ಅಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷೆ ಚಂದ್ರಮ್ಮ, ಮನ್ಮುಲ್ ಮಾರ್ಗ ವಿಸ್ತರಣಾಧಿಕಾರಿ ಶಿವಶಂಕರ್, ನಿರ್ದೇಶಕರಾದ ಮಂಜೇಗೌಡ, ಜಯರಾಂ, ಗುಜ್ಜೇಗೌಡ, ಎಸ್.ಎನ್.ಲೋಕೇಶ್, ಶಶಿಕಲಾ, ಸಿಇಒ ಸತ್ಯನಾರಾಯಣ, ಹಾಲು ಪರಿವೀಕ್ಷಕ ಜಿತೇಂದ್ರ, ಗ್ರಾಪಂ. ಮಾಜಿ ಅಧ್ಯಕ್ಷ ಜಯರಾಂ, ಕೇಶವಮೂರ್ತಿ ಮತ್ತಿತರರಿದ್ದರು.