ಉಡುಪಿಯಲ್ಲಿ ಡಿಕೆಶಿಗೆ ಕ್ಷೀರಾಭಿಷೇಕ

DKShi
Published on

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ 4ನೇ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ.

ಡಿಕೆಶಿ ಪದಗ್ರಹಣ ಪ್ರತಿಜ್ಞಾ ಕಾರ್ಯಕ್ರಮ ರಾಜ್ಯದೆಲ್ಲೆಡೆ ಲೈವ್ ಸ್ಕ್ರೀನಿಂಗ್ ಕಾರ್ಯಕ್ರಮ ವಿಶೇಷವಾಗಿದ್ದು, ಕಾರ್ಯಕರ್ತರಲ್ಲಿ ಹೊಸ ಸಂಚಲನ, ಹುರುಪು ಮೂಡಿಸಿದೆ. ಪರ್ಕಳದಲ್ಲಿ ಕಾರ್ಯಕರ್ತರು ಬ್ಯಾನರ್‌ನಲ್ಲಿರುವ ಡಿ.ಕೆ ಶಿವಕುಮಾರ್ ಅವರ ಭಾವಚಿತ್ರಕ್ಕೆ ಪ್ಯಾಕೆಟ್ ಹಾಲಿನ ಅಭಿಷೇಕ ಮಾಡಿ ಶುಭ ಕೋರಿದ್ದಾರೆ.

ಗುರುವಾರ ಪರ್ಕಳದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕರಾದ ಯು.ಆರ್ ಸಭಾಪತಿ ಲೈವ್ ಕಾರ್ಯಕ್ರಮ ವೀಕ್ಷಣೆಗೆ ಚಾಲನೆ ನೀಡಿದರು. ಪರ್ಕಳದ ಕಾಂಗ್ರೆಸ್ ಮುಖಂಡ ಮೋಹನ್‌ದಾಸ್ ನಾಯಕ್ ಡಿಕೆಶಿ ಭಾವಚಿತ್ರಕ್ಕೆ ಹಾಲೆರೆದು, ಸರ್ವಕಾರ್ಯಕರ್ತರು ಜೊತೆಗೂಡಿ ತೆಂಗಿನಕಾಯಿ ಒಡೆದು ಶುಭಕೋರಿ ಜೈಕಾರಹಾಕುತ್ತಾ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಜಯ ಶೆಟ್ಟಿ ಬನ್ನಂಜೆ, ಗಣೇಶ್ ರಾಜ್ ಸರಳೇಬೆಟ್ಟು, ಅನಂತ್ ನಾಯ್ಕ ಸರಳಬೆಟ್ಟು, ದೇವಕಿ ಪೂಜಾರಿ ನೆಹರು ನಗರ. ಬಾಲಕೃಷ್ಣ ಶೆಟ್ಟಿ ಬನ್ನಂಜೆ, ರಾಜೇಶ್ ಪ್ರಭು ಪರ್ಕಳ, ಉಪೇಂದ್ರ ನಾಯ್ಕ ತುಳಜಾ, ಸದಾನಂದ ಪೂಜಾರಿ ಪರ್ಕಳ, ಸುಜಿತ್ ಶೆಟ್ಟಿಗಾರ್ ಪರ್ಕಳ, ವಾಲ್ಟರ್ ಡಿಸೋಜ ಕೊಳಲಗಿರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net