ವೇಣೂರು ಠಾಣೆಯಲ್ಲಿ ಮಿಲಾದುನ್ನೆಭಿ ಶಾಂತಿ ಸಭೆ

Bel_Eid-Meeting
Published on

ಬೆಳ್ತಂಗಡಿ : ವೇಣೂರು ಆರಕ್ಷಕ ಠಾಣೆಯಲ್ಲಿ ಮಿಲಾದುನ್ನೆಭಿ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಉಪನಿರೀಕ್ಷಕಿ ಶೈಲಾ ಮುರಗೋಡ್ ಅಧ್ಯಕ್ಷತೆ ವಹಿಸಿದ್ದರು.

ಪಡ್ಡಂದಡ್ಕ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ, ಕಟ್ಟೆ ಮಸೀದಿ ಅಧ್ಯಕ್ಷ ನವಾಜ್, ವೇಣೂರಿನ ಹಮೀದ್, ಅಳದಂಗಡಿ ಅಸಿಫ್ ಯಾಕುಬ್, ಕಾಶಿಪಟ್ಣದ ಪುತ್ತುಮೋನು, ಪತ್ರಕರ್ತ ಎಚ್.ಮಹಮ್ಮದ್ ವೇಣೂರು, ಖಾಲಿದ್ ಪುಲಬೆ, ಅಲಿಯಬ್ಬ ಪುಲಬೆ, ಅಶ್ರಫ್ ಶಾಂತಿನಗರ, ಅಲ್ತಾಫ್ ಆರಂಬೋಡಿ, ವೇಣೂರು ಠಾಣಾ ವ್ಯಾಪ್ತಿಯ ಮಸೀದಿ ಅಧ್ಯಕ್ಷ-ಕಾರ್ಯದರ್ಶಿಗಳು, ಮಸೀದಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಚ್.ಸಿ.ಪಂಪಾವತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net