ಕೋಡಿಂಬಾಳ ಮಸೀದಿಯಲ್ಲಿ ಮಿಲಾದ್ ಫೆಸ್ಟ್

Kdb_Milad-fest
Published on

ಕಡಬ: ಕೋಡಿಂಬಾಳ ರಹ್ಮಾನಿಯ ಜುಮಾ ಮಸೀದಿಯಲ್ಲಿ ಹಿಮಾಯುತ್ತುಲ್ ಇಸ್ಲಾಂ ಮದರಸ ಕೋಡಿಂಬಾಳ ಮತ್ತು ಹಿದಾಯತ್ತುಲ್ ಇಸ್ಲಾಂ ಮದರಸ ಕೊಡೆಂಕೇರಿ ಜಂಟಿ ಆಶ್ರಯದಲ್ಲಿ ಮೆಹ್ಪಿಲೇ ತ್ವೈಬಾ ಮಿಲಾದ್ ಫೆಸ್ಟ್ ಇತ್ತೀಚೆಗೆ ನಡೆಯಿತು.

ಹನೀಫ್ ಸಅದಿ ಚಾಲನೆ ನೀಡಿದರು. ಜೆ.ಎಂ.ಕೋಡಿಂಬಾಳದ ಖತೀಬ ಅಬೂಬಕ್ಕರ್ ಮದನಿ ಉದ್ಘಾಟಿಸಿದರು. ಫಝಲ್ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಇಲ್ಯಾಸ್ ಮದನಿ, ಕೋಶಾಧಿಕಾರಿ ಮಹಮ್ಮದ್ ಶರೀಫ್, ಅಬ್ದುಲ್ ಖಾದರ್, ಶೇಕ್ ಅಹ್ಮದ್, ಅಬೂಬಕ್ಕರ್ ಕೆ.ಎಸ್, ಡಿ.ಎಂ.ಆಲಿ, ಹಾಜಿ, ಶರೀಫ್ ಕೆ.ಎಸ್, ರಫೀಕ್ ಅಜ್ಜಿಕಟ್ಟೆ, ವಕೀಲ ಇಸಾಕ್, ಎನ್.ಐ.ವೈ.ಡಿ.ಸಿ.ಯ ಅಧ್ಯಕ್ಷ ಅಬೂಬಕ್ಕರ್ ಪಾಲಪ್ಪೆ, ಎಸ್.ವೈ.ಎಸ್ ಅಧ್ಯಕ್ಷ ನಯಾಜ್ ಕಜೆಮೂಲೆ, ಎಸ್‌ಎಸ್‌ಎಫ್ ಅಧ್ಯಕ್ಷ ನೌಶಾದ್, ಹಿರಿಯರಾದ ಅಬ್ಲ್ ರಹಿಮಾನ್ ರವತಾರ್, ಬಪ್ಪು ಸಾಹೇಬ್, ಯೂಸುಫ್ ಸಾಹೇಬ್ ಉಪಸ್ಥಿತರಿದ್ದರು. ಕವ್ವಾಲಿ, ಬುರ್ದಾ ಅಲಪನೆ, ದಫ್ ಸ್ಪರ್ಧೆ ನಡೆಯಿತು.

ಶಾಮ್ಮಸ್ ಸಅದಿ ಬಹುಮಾನ ವಿತರಣೆ ನೆರವೇರಿಸಿದರು. ಜಮಾತ್ ಪ್ರಧಾನ ಕಾರ್ಯದರ್ಶಿ ಝಿಯಾರ್ ಸ್ವಾಗತಿಸಿದರು. ಮುತ್ತಲಿಬ್ ಝೋಹರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net