ಕಂಬಳದಲ್ಲಿ ಮತ್ತೆ ಸಾಧನೆ ಮೆರೆದ ಮಿಜಾರು ಶ್ರೀನಿವಾಸ ಗೌಡ; 8.96 ಸೆಕೆಂಡ್​ಗಳಲ್ಲಿ 100 ಮೀಟರ್ ಓಟ!

Feature
Published on

ಮಂಗಳೂರು: ಕಂಬಳದಲ್ಲಿ ಈಗಾಗಲೇ ದಾಖಲೆ ಮಾಡಿರುವ ಮಿಜಾರು ಶ್ರೀನಿವಾಸ ಗೌಡ ಅವರು ಇದೀಗ ತಮ್ಮದೇ ದಾಖಲೆ ಮುರಿದು ಹೊಸದೊಂದು ರೆಕಾರ್ಡ್ ಮಾಡಿ ಸಾಧನೆ ಮೆರೆದಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆಯುತ್ತಿರುವ ಸೂರ್ಯ-ಚಂದ್ರ ಜೋಡುಕೆರೆ ಕಂಬಳದಲ್ಲಿ ಶ್ರೀನಿವಾಸ ಗೌಡ ಹೊಸ ದಾಖಲೆ ಮಾಡಿ ಗಮನ ಸೆಳೆದಿದ್ದಾರೆ. ಅವರು 100 ಮೀಟರ್ ದೂರವನ್ನು ಕೇವಲ 8.96 ಸೆಕೆಂಡ್​ಗಳಲ್ಲಿ ತಲುಪಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನೇಗಿಲು ಹಿರಿಯ ವಿಭಾಗದ ಕೋಣಗಳನ್ನು ಓಡಿಸಿದ ಶ್ರೀನಿವಾಸ ಗೌಡ, 125 ಮೀಟರ್ ದೂರವನ್ನು 11.21 ಸೆಕೆಂಡ್​ಗಳಲ್ಲಿ ಮುಟ್ಟಿದ್ದಾರೆ. ಅದನ್ನು 100 ಮೀಟರ್ ದೂರಕ್ಕೆ ಹೋಲಿಕೆ ಮಾಡಿದಾಗ ಕೇವಲ 8.96 ಸೆಕೆಂಡ್​ಗೆ ತಲುಪಿದಂತಾಗಿದೆ. ಈ ಮೂಲಕ ಅವರು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಪರಾಕ್ರಮ ತೋರಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net