

ಹಗರಿಬೊಮ್ಮನಹಳ್ಳಿ: ಬದುಕುಳಿಯಲು ಹಾಗೂ ಆಹಾರವನ್ನು ಅರಸಿ ತುಂಗಾಭದ್ರಾ ನದಿಯ ಹಿನ್ನೀರಿನ ವ್ಯಾಪ್ತಿಯಲ್ಲಿ ಆಗಮಿಸುತ್ತ್ತಿವೆ.
ಸಾವಿರಾರು ಕಿಮೀ.ಗಳಿಂದ ವಲಸೆ ಬರುವ ಪಕ್ಷಿಗಳಿಗೆ ರಕ್ಷಣೆ ನೀಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಮಕ್ಕಳ ತಜ್ಞ ರಾಜೀವ್ ಹೇಳಿದರು.
ತಾಲೂಕಿನ ಅಂಕಸಮುದ್ರ ಕೆರೆ ಪಕ್ಷಿಧಾಮದಲ್ಲಿ ಶನಿವಾರ ಪ್ರಾದೇಶಿಕ ಅರಣ್ಯ ಇಲಾಖೆ ಜಿಲ್ಲಾ ಹಾಗೂ ಹಡಗಲಿ ವಲಯ ಮತ್ತು ಹಗರಿಬೊಮ್ಮನಹಳ್ಳಿ ಗ್ರೀನ್ ಎಚ್.ಬಿ.ಎಚ್, ಗ್ರಾಮದ ಯುವ ಬ್ರಿಗೆಡ್ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಪಕ್ಷಿಗಳ ದಿನಾಚರಣೆ ಹಾಗೂ ವಲಸಿಗ ಹಕ್ಕಿಗಳ ಸಂಖೆ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷಿಗಳು ಭೂಗೋಳದ ಹಿಮಾಲಯ ಪರ್ವತಗಳ ಆಚೆಯಿಂದ ಹೊರ ದೇಶಗಳಾದ ಯುರೋಪ್, ರಷ್ಯಾ, ಕೋರಿಯಾಗಳಿಂದ ಭಾರತದ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಇಲ್ಲಿಯ ವಾತಾವರಣಕ್ಕೆ ಆ ಪಕ್ಷಿಗಳು ಹೊಂದಿಕೊಂಡಿವೆ ಎಂದು ಅರ್ಥ. ಅವುಗಳನ್ನು ಉಳಿಸಿಕೊಳ್ಳುವ ಹೊಣೆ ನಮ್ಮದಾಗಿದೆ. ಪಕ್ಷಿಗಳ ವಲಸೆಯಿಂದ ರೋಗಬಾಧೆಗೆ ತುತ್ತಾಗುವ ಸಸ್ಯ ಸಂಕುಲಗಳು ಸಹ ಉಳಿಯುತ್ತಿವೆ ಎಂದರು.
ಹಡಗಲಿ ವಲಯ ಅರಣ್ಯಾಧಿಕಾರಿ ರೇಣುಕಮ್ಮ ಮಾತನಾಡಿ, ಪಕ್ಷಿಗಳನ್ನು ಸಂರಕ್ಷಿಸುವ ಜೊತೆಗೆ ಕಾಡು ಉಳಿಸುವುದರಿಂದ ನಾಡು ಉಳಿಯಲು ಸಾಧ್ಯ. ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ ಎಂದರು.
ಬಿಎನ್‌ಎಚ್‌ಎಸ್‌ನ ಕರ್ನಾಟಕ ರಾಜ್ಯ ಸಂಯೋಜಕ ಡಾ.ಸುಬ್ರಮಣ್ಯ ಮಾತನಾಡಿ, ಮಕ್ಕಳಿರುವಾಗಲೇ ವಿವಿಧ ಜಾತಿಯ ಪಕ್ಷಿಗಳನ್ನು ನೋಡಬೇಕು ಬೆಳೆಯುತ್ತಾ ಬೆಳೆಯುತ್ತಾ ಅವುಗಳ ಬಗ್ಗೆ ಸಂಶೋಧನೆ ಮಾಡಬೇಕು. ಅವುಗಳ ಧ್ವನಿಯನ್ನು ಆಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ಅಂಕಸಮುದ್ರ ಶಾಲೆ ವಿದ್ಯಾರ್ಥಿಗಳು ಅರಣ್ಯ ಮತ್ತು ಪರಿಸರ ಹಾಗೂ ಪಕ್ಷಿಗಳ ಅರಿವು ಕುರಿತು ಬರೆಯಲಾಗಿದ್ದ ಪ್ರಬಂಧಗಳಿಗೆ 3ಬಹುಮಾನಗಳನ್ನು ವಿತರಿಸಲಾಯಿತು.
ಬಿ.ಜಿ.ಹಳ್ಳಿ ಗ್ರಾಪಂ ಅಧ್ಯಕ್ಷೆ ಎಚ್.ಮೈಲಮ್ಮ, ಡಾ.ಬಸವರಾಜ ರೆಡ್ಡಿ, ಡಾ.ಕರಿಬಸಯ್ಯ, ಡಾ.ಪ್ರವೀಣ, ಕೃಷಿ ವಿಜ್ಞಾನಿ ಆನಂದ ಬಾಬು, ಪಕ್ಷಿ ತಜ್ಞ ವಿಜಯ ಇಟ್ಟಿಗಿ, ಪಕ್ಷಿ ಪ್ರೇಮಿಗಳಾದ ಬೆಂಗಳೂರಿನ ಸೌಂದರ್ಯವಲ್ಲಿ, ಶಿಕ್ಷಕಿ ಲಕ್ಷ್ಮೀ, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಾದ ಹಡಗಲಿಯ ಕಿರಣ ಕಲ್ಲಮ್ಮನವರ್, ಹೊಸಪೇಟೆ ನಾಗರಾಜ, ಡಿವೈಆರ್‌ಎಫ್‌ಗಳಾದ ದುಶಾಂತಗೌಡ, ರಾಮು, ಶ್ರೀಕಾಂತ, ಬಸವನಗೌಡ, ಸಿಬ್ಬಂದಿ ಮಲ್ಲಿಕಾರ್ಜುನ, ಮಂಜುನಾಥ, ಬಾಬು ಇತರರಿದ್ದರು. ಡಿವೈಆರ್‌ಎಫ್ ಅಡವಿಹಳ್ಳಿ ಕರಿಬಸಪ್ಪ ಹಾಗೂ ಅರಣ್ಯ ಪಾಲಕರಾದ ಲೀಲಾ ರವಿ ಕುಮಾರ್ ನಿರ್ವಹಿಸಿದರು.
ಗಣತಿಯಲ್ಲಿ 133 ಹಕ್ಕಿ ಪ್ರಭೇದಗಳು ಪತ್ತೆ
ಅಂಕಸಮುದ್ರ ಪಕ್ಷಿಧಾಮದಲ್ಲಿ ಹಕ್ಕಿಗಳ ಗಣತಿ ಕಾರ್ಯ ನಂತರ ಮಾತನಾಡಿದ ಪಕ್ಷಿ ತಜ್ಞ ವಿಜಯ ಇಟ್ಟಿಗಿ ಕೆರೆ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಮೂರು ತಂಡಗಳನ್ನಾಗಿ ರಚಿಸಿ, ವಲಸೆ ಹಕ್ಕಿಗಳನ್ನು ಗುರುತಿಸುವ ಮೂಲಕ 133ಹಕ್ಕಿ ಪ್ರಭೇದಗಳನ್ನು ಗಣತಿ ಮಾಡಲಾಗಿದೆ.
ಪ್ರಮುಖವಾಗಿ ಕಂಡುಬಂದ ಪಕ್ಷಿಗಳು ಕೆಂಪು ಜುಟ್ಟಿನ ಬಾತು ಇದು ಕಳೆದ 3ವರ್ಷಗಳ ಹಿಂದೆ ಕಂಡಿದ್ದು, ಇಲ್ಲಿ ಬಿಟ್ಟರೆ ಬೀದರ್ ಕಾರನ್‌ಜೋಳ್‌ನಲ್ಲಿ ಕಂಡುಬರುತ್ತಿದೆ. ಇದುಕೂಡ ಚಿಕ್ಕ ಹಕ್ಕಿಯಾಗಿದೆ. ಕಳೆದ ವರ್ಷ 144 ಪ್ರಭೇದದ ಹಕ್ಕಿಗಳು ಪತ್ತೆಯಾಗಿದ್ದವು, ಈ ವರ್ಷ 133 ಜಾತಿಯ ಹಕ್ಕಿಗಳು ಗಣತೆಯಲ್ಲಿ ದೊರೆತಿದೆ. ಇಲ್ಲಿ 10ಜಾತಿ ಪಕ್ಷಿಗಳು ಕಡಿಮೆ ಇರಬಹುದು.
ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಎರಡು ಪಟ್ಟು ಪಕ್ಷಿಗಳ ಸಂಖ್ಯೆ ಹೆಚ್ಚಿದೆ. ಋತುಮಾನಕ್ಕೆ ಅನುಗುಣವಾಗಿ ಆಗಮಿಸುವ ಈ ಪಕ್ಷಿಗಳಲ್ಲಿ ಪ್ರಮುಖವಾದುವೆಂದರೆ, ಕೊಂಬಿನಬಾತು, ಹೆರ್ಜ್ಜಾಲೆ ಹಕ್ಕಿ, ಸಿಳ್ಳೆಬಾತು, ಕತ್ತಲಗುಪ್ಪಿ ಕಂಡು ಬಂದಿವೆ ಎಂದರು. ಜಿಲ್ಲಾ ಎಸಿಎಫ್ ಕಿರುಬನಾಥರೊಂದಿಗೆ ಚರ್ಚಿಸಿದ ವಿಜಯ ಇಟ್ಟಿಗಿ, ಕೃಷಿ ತಜ್ಞ ಆನಂದ್ ಬಾಬು ಹಾಗೂ ಮಕ್ಕಳ ತಜ್ಞ ರಾಜೀವ್, ಈಗಾಗಲೇ ಕೆರೆ ಸಂಪೂರ್ಣ ಭರ್ತಿಯಾಗಿರುವುದರಿಂದ ಇನ್ನೂ ನೀರಿನ ಅವಶ್ಯಕತೆ ಇಲ್ಲ. ಅಲ್ಲದೆ, ಪಕ್ಷಿಗಳು ತಂಗಲು ಕೆರೆಯಲ್ಲಿ ನಡುಗಡ್ಡೆಗಳು ನಿರ್ಮಾಣವಾಗಬೇಕು, ಕೆರೆಯಿಂದ ಚಳಿಗಾಲದಲ್ಲಿ ನೀರು ನೆಲಮಟ್ಟಕ್ಕೆ ಖಾಲಿಯಾಗಬೇಕು. ಬೇಸಿಗೆಯಲ್ಲಿ ಸಂಪೂರ್ಣ ಖಾಲಿಯಾದರೆ ಹಕ್ಕಿಗಳ ಆಶ್ರಯಕ್ಕೂ ಮತ್ತು ಮರಗಿಡಗಳು ಉತ್ತಮವಾಗಿ ಬೆಳೆಯಲು ಅನುಕೂಲವಾಗಲಿದೆ. ಕೆರೆ ನಿರ್ವಹಣೆ ಮುಖ್ಯವಾಗಿದೆ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಡುಗಡ್ಡೆಗಳ ನಿರ್ಮಾಣ ಮಾಡಲಾಗುವುದು. ಇನ್ನಷ್ಟು ಸಸಿಗಳನ್ನು ನೆಟ್ಟು ಪಕ್ಷಿಗಳಿಗೆ ಅನುಕೂಲ ವಾತಾವರಣ ನಿರ್ಮಾಣ ಮಾಡಲಾಗುವುದು. ಕಿರುಬನಾಥ, ವಿಜಯನಗರ ಜಿಲ್ಲಾ ಎಸಿಎಫ್