ಹೆಚ್ಚಾಯ್ತು ಪುಂಡರ ಹಾವಳಿ,ಮಧ್ಯರಾತ್ರಿ ಬಿಯರ್ ಬಾಟಲಿಯಿಂದ ಬೇಕರಿ ಮಾಲೀಕನ ಮೇಲೆ ಹಲ್ಲೆ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

Bekaryownerattc
Published on

ಬಾಗಲಕೋಟೆ: ಮಧ್ಯರಾತ್ರಿ ಬೇಕರಿಯೊಂದರಲ್ಲಿ ದಾಂಧಲೆ ನಡೆಸಿದ ಪುಂಡರ ಪುಂಡಾಟಿಕೆಗೆ ಬೇಕರಿ ಮಾಲೀಕ ಗಂಭೀರ ಗಾಯಗೊಂಡಿದ್ದಾನೆ.

ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ತಡರಾತ್ರಿ ಬಂದ ಕೆಲವು ಯುವಕರ ಗುಂಪು ಕೇಕ್​ ನೀಡುವಂತೆ ಹೇಳಿದ್ದಾರೆ. ಈ ವೇಳೆ ರಾತ್ರಿಯಾಗಿದ್ದು, ಎಲ್ಲಾ ಖಾಲಿಯಾಗಿದೆ ಈಗ ಕೊಡಲು ಸಾಧ್ಯವಿಲ್ಲ ಎಂದು ಬೇಕರಿಯ ಯುವಕ ಹೇಳಿದ್ದಾನೆ.

ಮದ್ಯ ರಾತ್ರಿ ಬೇಕರಿ ಮೇಲೆ ಕೈಯಲ್ಲಿ ಬಿಯರ್ ಬಾಟಲ್ ಹಿಡಿದು 8 ಜನರ ಗುಂಪಿನಿಂದ ದಾಳಿ ಮಾಡಿದ್ದಾರೆ. ಯುವಕರ ಗುಂಪು ಕುಡಿದ ಮತ್ತಿನಲ್ಲಿ ನಡೆಸಿದ ಹಲ್ಲೆ ಸದ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇತ್ತೀಚೆಗೆ ವಿದ್ಯಾಗಿರಿ ಭಾಗದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಹ್ಯಾಪಿ ಕೆಕ್ಸ್ ಮಾಲೀಕ ಪ್ರತೀಕ್ ಎಂಬುವವರು ತೀವ್ರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇಕ್​ ಕೇಳಲು ಬಂದ ಈ ಪುಂಡರು ಬೇಕರಿ ಶೆಟರ್​ ಒದ್ದು ದಾಂಧಲೆ ನಡೆಸಿದ್ದಾರೆ. ಶೆಟರ್​ ಶಬ್ದ ಕೇಳುತ್ತಿದ್ದಂತೆ ಬಾಗಿಲು ತೆಗದ ಸಿಬ್ಬಂದಿ, ಕೇಕ್​​ ಕೂಡ ನೀಡಿದ್ದಾರೆ. ಆದರೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ನವನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net