‘ಮಿಡಲ್ ಕ್ಲಾಸ್ ಫ್ಯಾಮಿಲಿ ’ ತುಳು ಸಿನಿಮಾ ಬಿಡುಗಡೆ

mng-31jan-middle class
Published on




ಮಂಗಳೂರು : ರೋಹನ್ ಕಾರ್ಪೊರೇಷನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನೆಂಟ್ ಪ್ರೊಡಕ್ಷನ್, ಎಚ್‌ಪಿಆರ್ ಫಿಲಂಸ್ ಸಹಯೋಗದಲ್ಲಿ ಆನಂದ್.ಎನ್. ಕುಂಪಲ ಅವರ ನಿರ್ಮಾಣದಲ್ಲಿ ತಯಾರಾದ ‘ಮಿಡಲ್ ಕ್ಲಾಸ್ ಫ್ಯಾಮಿಲಿ ‘ತುಳು ಸಿನಿಮಾದ ಬಿಡುಗಡೆ ಸಮಾರಂಭ ಶುಕ್ರವಾರ ಭಾರತ್ ಮಾಲ್‌ನಲ್ಲಿ ನಡೆಯಿತು.
ನಟ ವಿನೀತ್‌ಕುಮಾರ್ ಮಾತನಾಡಿ ‘ಮಿಡಲ್ ಕ್ಲಾಸ್ ಫ್ಯಾಮಿಲಿ ಬಿಗ್ ಬಜೆಟ್ ಸಿನಿಮಾ ಆದ್ದರಿಂದ ತುಳುವರು ಮೊದಲ ಎರಡು ವಾರಗಳಲ್ಲೇ ಸಿನಿಮಾ ವೀಕ್ಷಿಸಿ ತಂಡದ ಪ್ರಯತ್ನವನ್ನು ಗೆಲ್ಲಿಸಬೇಕು ಎಂದು ವಿನಂತಿಸಿದರು.
ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ ‘ಎರಡು ವಾರಗಳ ಒಳಗಾಗಿ ಸಿನಿಮಾ ನೋಡಿದ ಟಿಕೆಟ್ ಜತೆ ರೋಹನ್ ಕಾರ್ಪೋರೇಷನ್‌ಗೆ ಆಗಮಿಸಿ ಫ್ಲಾೃಟ್ ಅಥವಾ ಶಾಪ್ ಖರೀದಿಸಿದರೆ ಶೇ. 10 ರಿಯಾಯಿತಿ ನೀಡಲಾಗುವುದು. ತುಳುವರು ಈ ಆಫರ್ ಬಳಸಿಕೊಳ್ಳಿ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತಾಡಿ, ಮಿಡಲ್ ಕ್ಲಾಸ್ ಫ್ಯಾಮಿಲಿ ಸಿನಿಮಾದಲ್ಲಿ ಹಾಸ್ಯದ ಜತೆ ಒಳ್ಳೆಯ ಸಂದೇಶ ಇರುವ ಬಗ್ಗೆ ತಿಳಿದಿದ್ದೇವೆ. ಈ ಹಿಂದಿನಂತೆ ಅನಾಥಾಶ್ರಮಗಳ ಮಕ್ಕಳಿಗೆ ಉಚಿತ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತೇನೆ ಎಂದರು.
ಎಂಎಲ್‌ಸಿ ಐವನ್ ಡಿಸೋಜಾ, ಚಿತ್ರ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ, ಗೇರು ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಶುಭ ಹಾರೈಸಿದರು.
ಮೇಯರ್ ಮನೋಜ್ ಕುಮಾರ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ನಾಗರಾಜ ಶೆಟ್ಟಿ,
ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪದ್ಮರಾಜ್.ಆರ್., ಎಂಎಲ್‌ಸಿ ಡಾ.ಧನಂಜಯ ಸರ್ಜಿ, ಕೆಪಿಎ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಮಂಗಳೂರು ವಲಯಾಧ್ಯಕ್ಷರಾದ ಹರೀಶ್ ಅಡ್ಯಾರ್,ದಯಾನಂದ ಕತ್ತಲ್ಸಾರ್, ಲೀಲಾಕ್ಷ ಕರ್ಕೇರ, ಚಿತ್ರ ನಟರಾದ ಅರ್ಜುನ್ ಕಾಪಿಕಾಡ್, ಶೋಭರಾಜ್ ಪಾವೂರು, ಸಂದೀಪ್ ಮಲಾನಿ , ಉದ್ಯಮಿ ವಿಠಲ್ ಕುಲಾಲ್, ಸೀತಾರಾಮ ಶೆಟ್ಟಿ, ಪ್ರಕಾಶ್ ಧರ್ಮನಗರ , ಚಿತ್ರ ನಿರ್ಮಾಪಕರಾದ ಆನಂದ್.ಎನ್. ಕುಂಪಲ, ಹರಿಪ್ರಸಾದ್ ರೈ, ಭರತ್ ಕುಮಾರ್ , ಗಣೇಶ್ ಕೊಲ್ಯ ಅಶ್ವಿನಿ ರಕ್ಷಿತ್, ತಮ್ಮ ಲಕ್ಷ್ಮಣ, ಜಗದೀಶ್ ಕದ್ರಿ, ಅಶ್ವಿತ್ ಕೊಟ್ಟಾರಿ, ನಿರ್ದೇಶಕ ರಾಹುಲ್ ಅಮೀನ್, ನಟಿ ಸಮತಾ ಅಮೀನ್
, ನಿತಿನ್‌ರಾಜ್ ಶೆಟ್ಟಿ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
‘ಮಿಡಲ್ ಕ್ಲಾಸ್ ಫ್ಯಾಮಿಲಿ ’ ತುಳು ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್‌ಮಾಲ್ನ ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಬಿಗ್ ಸಿನಿಮಾಸ್ ದೇರಳಕಟ್ಟೆ, ಪುತ್ತೂರು, ಪಡುಬಿದ್ರೆ, ಉಡುಪಿಯಲ್ಲಿ ಕಲ್ಪನಾ, ಬಿಗ್ ಸಿನಿಮಾಸ್,, ಮಣಿಪಾಲದಲ್ಲಿ
ಐನಾಕ್ಸ್, ಬಿಗ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ನಲ್ಲಿ ನಟರಾಜ್, ಸಿನಿ ್ಯಾಲಕ್ಸಿ, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ ಚಿತ್ರಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net