

ಪಣಜಿ (ಮಡಗಾಂವ): ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಗೋವಾದ ಮಡಗಾಂವ ಮೋತಿ ಡೊಂಗರ್ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮ ಜರುಗಿದವು.
ಸೋಮವಾರ ಮಧ್ಯಾರಾಧನೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವಿಠ್ಠಲ್ ಭಜನ್ರವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ಗೋವಾದ ಮಾಜಿ ಸಿಎಂ ದಿಗಂಬರ್ ಕಾಮತ್ ಆಗಮಿಸಿ ರಾಯರ ದರ್ಶನ ಪಡೆದರು.
ಮಂಗಳವಾರ ಉತ್ತರ ಆರಾಧನೆ ಕಾರ್ಯಕ್ರಮದಲ್ಲಿ ಬೆಳಗ್ಗೆ 11 ಗಂಟೆಗೆ ಶ್ರೀ ಪ್ರಹ್ಲಾದ ಮಹಾರಾಜರ ರಥೋತ್ಸವ ಮೆರವಣಿಗೆ ನಡೆಯಿತು. ಸಂಜೆ 6 ಗಂಟೆಗೆ ಸುಪ್ರಭಾತಂ ಮತ್ತು ನಿರ್ವಲ್ಯ ವಿಸರ್ಜನ, 7.30ರಿಂದ ಅಷ್ಟೋತ್ತರ ಸ್ತೋತ್ರ ಪಾರಾಯಣ ಮತ್ತು ಪಂಚಾಮೃತ ಅಭಿಷೇಕ. 9 ಗಂಟೆಗೆ ಉತ್ಸವ ರಾಯರ ಪಾದಪೂಜೆ, ಮಧ್ಯಾಹ್ನ 1 ಗಂಟೆಗೆ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ. ಸಂಜೆ 7.30 ಕ್ಕೆ ಪಲ್ಲಕ್ಕಿ ಸೇವೆ, ರಥೋತ್ಸವ, ಸ್ವಸ್ತಿ ವಾಚನ ಜರುಗಿತು.