ತುಮಕೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲೂ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಚಿಂತನೆ

Ananya_Commerce
Published on

ತುಮಕೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ ಆರಂಭಿಸಿರುವ ಮಧ್ಯಾಹ್ನದ ಬಿಸಿ ಊಟ ಯೋಜನೆಯು ಗ್ರಾಮೀಣಭಾಗದ ವಿದ್ಯಾರ್ಥಿಗಳ ಹಸಿವು ನೀಗಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆ ಎನಿಸಿದ್ದು ಈ ಯೋಜನೆಯನ್ನು ವಿವಿ ವ್ಯಾಪ್ತಿಯ ಇತರೆ ಕಾಲೇಜುಗಳಿಗೆ ವಿಸ್ತರಿಸುವ ಚಿಂತನೆ ಇದೆ ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಇತ್ತೀಚೆಗೆ ಅನನ್ಯ ಇನ್ಟ್ಸಿಟ್ಯೂಟ್ ಅಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್‌ನ ವತಿಯಿಂದ ಅನನ್ಯ ಅಭ್ಯುದಯ-2023 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಾನಿಗಳ ನೆರವಿನಲ್ಲಿ ವಿವಿಯಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಆರಂಭಿಸಲಾಗಿದೆ. ಈ ಯೋಜನೆ ಗ್ರಾಮೀಣಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದೆ ಎಂದರು.

ಓದಿನ ಜೊತೆಗೆ ಸೃಜನಾತ್ಮಕ ಕಲೆ, ಸಂಸ್ಕೃತಿ ಹಾಗೂ ಕ್ರೀಡೆಯಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಬದಲಾಗಿ ಉದ್ದಿಮೆದಾರಾಗನ್ನಾಗಿ ರೂಪಿಸಲು ಕೌಶಲ್ಯ ಬೆಳೆಸಬೇಕಿದೆ ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಎಂ.ಕಾಂ.,ನಲ್ಲಿ 4ನೇ ರ‌್ಯಾಂಕ್ ಪಡೆದ ಜಿ.ವರಲಕ್ಷ್ಮೀ, 7ನೇ ರ‌್ಯಾಂಕ್ ಪಡೆದ ಕೆ.ರಕ್ಷಿತಾ, 8ನೇ ರ‌್ಯಾಂಕ್ ಪಡೆದ ಬಿ.ಎಸ್.ವಿಶ್ವಾಸ್ ಹಾಗೂ ಬಿ.ಕಾಂ.,ನಲ್ಲಿ 9ನೇ ರ‌್ಯಾಂಕ್ ಪಡೆದ ಬಿ.ಇ.ಮೋಹಿತರನ್ನು ಸನ್ಮಾನಿಸಲಾಯಿತು.

ಅನನ್ಯ ಸಂಸ್ಥೆಯ ಅಧ್ಯಕ್ಷ ಎಸ್.ವಿಶ್ವನಾಥ್ ಅಧ್ಯಕ್ಷತೆವಹಿಸಿದ್ದರು. ತುಮಕೂರು ವಿವಿ ವಾಣಿಜ್ಯ ವಿಭಾಗದ ಪ್ರೊ.ಪಿ.ಪರಮಶಿವಯ್ಯ, ಉಪಾಧ್ಯಕ್ಷ ಬಿ.ಆರ್.ಉಮೇಶ್, ಕಾರ್ಯದರ್ಶಿ ಚೆನ್ನಬಸವಪ್ರಸಾದ್, ಟ್ರಸ್ಟಿಗಳಾದ ಎಚ್.ಎನ್.ಚಂದ್ರಶೇಖರ್, ಟಿ.ಎನ್.ಶ್ರೀಕಂಠಸ್ವಾಮಿ, ಎನ್.ವಿ.ಬಾಲಾಜಿ, ವಿ.ರಜತ್, ಡಾ.ಎಚ್.ಹರೀಶ್, ಪ್ರಾಂಶುಪಾಲರಾದ ಡಾ.ಎಂ.ವಿಶ್ವಾಸ್, ಪಿಯು ಪ್ರಾಂಶುಪಾಲ ಡಾ.ರಘು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net